‘ದಲಿತ ಕಥನ’ ಲೇಖಕ ಎಚ್.ಟಿ. ಪೋತೆ ಅವರ ಸಣ್ಣಕತೆಗಳ ಸಂಕಲನ, ಅನುಭವಗಳೇ ಅಕ್ಷರ ರೂಪ ಪಡೆದು ಇಲ್ಲಿ ಕಥೆಗಳಾಗಿವೆ. ಅಸ್ಪಶ್ಯ ಸಮುದಾಯವೊಂದರ ತವಕ, ತಲ್ಲಣ, ಆತಂಕ ಅವಮಾನದಂತಹ ಘಟನೆಗಳು ಕಥಾವಸ್ತುಗಳು. ಹಾಗೂ, ಇಲ್ಲಿಯ ಸಂಗತಿಗಳು ಕೇವಲ ಒಂದು ಕುಟುಂಬದ ತವಕ, ತಲ್ಲಣ ಅವಮಾನಗಳಾಗಿರದೇ, ಬಹುಸಂಖ್ಯಾತ ಸಮುದಾಯಕ್ಕೆ ಅಂಟಿಕೊಂಡು ಬಂದಿರುವ ಯಾತನೆಯ ಕಥನಗಳಾಗಿವೆ.
ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...
READ MORE