‘ಮೊಡಚಿಗಳು’ ಸಂಗನಗೌಡ ಹಿರೇಗೌಡ ಅವರ ಕಥಾಸಂಕಲನವಾಗಿದೆ. ಇದಕ್ಕೆ ಕೇಶವ ಮಳಗಿ ಅವರ ಬೆನ್ನುಡಿ ಬರಹವಿದೆ; ಸಂಗನಗೌಡ ಹಿರೇಗೌಡ ಅವರ ಕಥೆಗಳು ಧಾತುವಿನ ಋಣದಲ್ಲಿ ಹುಟ್ಟಿ, ಕೊನೆಗೆ ಮಣ್ಣು ಸೇರಿ ಋಣದ ಬದುಕನ್ನು ತೀರಿಸುವ ಮಣ್ಣಿನ ಮನುಷ್ಯ ಗೊಂಬೆಗಳ ಒಡಲ ಬೇಗುದಿಯನ್ನು, ಸುಖ-ಸಂತೋಷವನ್ನು, ಹಗೆತನ ಒಗೆತನವನ್ನು, ಪ್ರೇಮ-ಕಾಮ-ಸಂಕಟಗಳನ್ನು ಅತ್ಯಪೂರ್ವ ಪ್ರತಿಮೆ, ರೂಪಕಗಳನ್ನು ಸೃಷ್ಟಿಸಿ ಕಥಿಸುತ್ತವೆ. ಜೀವಜಂಜಾಟದಲ್ಲಿ ಸಾವುನೋವಿಗೆ, ಅಸಹನೀಯ ಅವಮಾನಕ್ಕೆ, ಅಸಂಗತ ಸಂಗತಿಗಳಿಗೆ ತೆರೆದುಕೊಂಡ ಪಾತ್ರಗಳ ಮೂಲಕ ತೆರೆದಿಡುತ್ತವೆ. ಒಂಬತ್ತು ಕಥೆಗಳಿರುವ ಈ ಸಂಕಲನದ ಪ್ರತಿ ನಿರೂಪಣೆಯೂ ಬಿರುಬಿಸಿಲಿನ ಬಯಲುಸೀಮೆಯಲ್ಲಿ ನಿಸರ್ಗಕೃಪೆಯಂತೆ ಸುರಿವ ಮಳೆಯಲ್ಲಿ ಹುಟ್ಟಿದ ಆಲಿಕಲ್ಲುಗಳಂತೆ ಸ್ಪಟಿಕವಾಗಿವೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
ಸಂಗನಗೌಡ ಹಿರೇಗೌಡ ಅವರು ಮೂಲತಃ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅಂಬರಖೇಡದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ತತ್ವಪದಗಳ ಕಾವ್ಯ ಮೀಮಾಂಸೆ’ ವಿಚಾರದಲ್ಲಿ ಸಂಶೋಧನ ಕೈಗೊಂಡಿದ್ದಾರೆ. ಓದು, ಬರವಣಿಗೆ ಇವರ ಹವ್ಯಾಸ ...
READ MORE