ಖ್ಯಾತ ಕಥೆಗಾರ ಕೇಶವರೆಡ್ಡಿ ಹಂದ್ರಾಳ ಅವರ ಕಥಾ ಸಂಕಲನ-ಒಕ್ಕಲ ಒನಪು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಇದು. ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಕಲಾತ್ಮಕ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳು ಓದುಗರ ಗಮನ ಸೆಳೆಯುತ್ತವೆ.
ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಕೇಶವರೆಡ್ಡಿ ಹಂದ್ರಾಳ ಅವರು 22-07-1957 ರಲ್ಲಿ ಮಧುಗಿರಿ ತಾಲೂಕಿನ ಹಂದ್ರಾಳದಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರೂ ಅನಕ್ಷರಸ್ಥರು . ಕೃಷಿ ಕೆಲಸಗಳನ್ನು ಮಾಡಿಕೊಂಡೇ ಹಂದ್ರಾಳದ ಪ್ರೈಮರಿ ಸ್ಕೂಲು , ಬ್ಯಾಲ್ಯದ ಮಿಡ್ಲಿಸ್ಕೂಲು ಪೂರೈಸಿದ್ದು . ತಾತ ನರಸಿಂಹರೆಡ್ಡಿ ಆಂಧ್ರದ ಅನಂತಪುರ ಜಿಲ್ಲೆಯ ಊರೊಂದರ ಜಮೀನುದಾರ . ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಆ ಸೀಮೆಯ ಶೋಷಕ ಬ್ರಿಟಿಷ್ ಕಲೆಕ್ಟರ್ ನನ್ನು ಖೂನಿ ಮಾಡಿ ರಾತ್ರೋರಾತ್ರಿ ಕರ್ನಾಟಕದ ಕಡೆ ಪ್ರಯಾಣ . ಕಾಪು ರೆಡ್ಡಿಯಾಗಿದ್ದ ತಾತ ಮದುವೆಯಾಗಿದ್ದು ಕಮ್ಮ ಜಾತಿಯ ಅಜ್ಜಿಯನ್ನು . 1947 ...
READ MORE