‘ನಾನೂ ಇರುವೆ’ ಟಿ. ಗೋವಿಂದರಾಜು ಅವರ ಕಥಾಸಂಕಲನವಾಗಿದೆ. ಬಹಳ ಸಾಮಾನ್ಯವಾಗಿರುವ ಥೀಮುಗಳನ್ನು ಬದಿಗಿಟ್ಟು ತಮ್ಮ ಧೋರಣೆಗಳಿಗೆ ಅನುಗುಣವಾದ ಕಲ್ಪನಾತ್ಮಕವಾದ ಕಥೆಗಳನ್ನು ಕಟ್ಟಿಕೊಟ್ಟಿರುವುದು ಗೋವಿಂದರಾಜು ಅವರ ವಿಶಿಷ್ಠತೆ. ಜಾನಪದ ವಿದ್ವಾಂಸರು ಸಾಮಾನ್ಯವಾಗಿ ಮಾಡುವಂತೆ ಹಳ್ಳಿಯ ಬದುಕನ್ನು ವೈಭವೀಕರಿಸುವುದರಲ್ಲಿ ಅವರಿಗೆ ಆಸಕ್ತಿಯಿಲ್ಲ. ಬದಲಾಗಿ ಆಧುನಿಕ ಬದುಕು ಅಂತಹ ತಾಣಗಳಲ್ಲಿ ಮೂಡಿಸಿರುವ ತಲ್ಲಣಗಳನ್ನು ತೋರಿಸಿಕೊಡುವುದು ಅವರಿಗೆ ಇಷ್ಟ. ಅಲ್ಲಿಯೂ ಅವರಿಗೆ ಸಿನಿಕತೆಯಾಗಲೀ ನಿರಾಶೆಯಾಗಲೀ ಇರುವ ಬದಲಾಗಿ ಶಿಕ್ಷಣದಂತಹ ಉಪಯುಕ್ತ ಮೌಲ್ಯಗಳನ್ನು ಮುನ್ನೆಲೆಗೆ ತರುತ್ತಾರೆ. ಮಠಮಾನ್ಯಗಳಂತಹ ಸಂಸ್ಥೆಗಳು ಮಾಡುವ ಅನ್ಯಾಯಗಳನ್ನು ಸಾತ್ವಿಕ ಕೋಪದಿಂದಲೇ ಬಯಲಿಗೆ ತರುತ್ತಾರೆ. 'ಹೊಡೀ ಬ್ಯಾಡಿ ಸಾ' ಅಂತಹ ಕಥೆಯಲ್ಲಿ ತನ್ನ ವಿದ್ಯಾರ್ಥಿ ಕೇಳಿದ ಸರಿಯಾದ ಪ್ರಶ್ನೆಯಿಂದ ಪ್ರಚೋದಿತನಾಗಿ ಸ್ವತಃ ತನ್ನದೇ ಬಾಲ್ಯಕ್ಕೆ ಮರಳುವ ಮಾಸ್ತರ ತಿಳಿವಳಿಕೆ ಬಹಳ ಮುಖ್ಯ. ಬಡತನದ ಬವಣೆಗಳನ್ನು ಯಾವುದೇ ಅಬ್ಬರವಿಲ್ಲದೆ ನಿರೂಪಿಸುವ ಇಂಥ ಕಥೆಗಳು ಬಹುಕಾಲ ಮನಸ್ಸಿನಲ್ಲಿ ಉಳಿಯುತ್ತವೆ. ಇಲ್ಲಿರುವ ಕಥೆಗಳನ್ನು ನಮಗೆ ಪರಿಚಿತವಾದ ಎರಡು ಗುಂಪುಗಳಲ್ಲಿ ವಿಂಗಡಿಸಬಹುದು. ಒಂದು ಕಥೆಗಾರನು ಕೇವಲ ನಿರೀಕ್ಷಕನಾಗುವ, ಲೋಕಕೇಂದ್ರಿತವಾದ ಬಗೆ, ಇನ್ನೊಂದು, ಕಥೆಗಾರನ ಸ್ವಂತ ಅನುಭವಗಳನ್ನು ವಿಮರ್ಶಾತ್ಮಕವಾಗಿ ನೋಡಿ ಬೆಲೆ ಕಟ್ಟುವ ಬಗೆ, ಕೆಲವು ಕಥೆಗಳಲ್ಲಿ ಇವೆರಡೂ ನೆಲೆಗಳು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹಾಸುಹೊಕ್ಕಾಗಿರುತ್ತವೆ.
ಡಾ. ಟಿ. ಗೋವಿಂದರಾಜು ಕವಿಯಾಗಿ, ಪ್ರಬಂಧಕಾರರಾಗಿ, ಕತೆಗಾರರಾಗಿ ಪರಿಚಿತರು. ಇವರು ಹುಟ್ಟಿದ್ದು 15.01.1953 ದೊಡ್ಡಬಳ್ಳಾಪುರ ತಾ. ಚನ್ನಾದೇವಿ ಅಗ್ರಹಾರದಲ್ಲಿ. ಇವರ ತಂದೆ ದೊಡ್ಡೇರಿ ತಿಮ್ಮರಾಯಪ್ಪ, ತಾಯಿ ಹೊನ್ನಮ್ಮ. ಕೃಷಿಕ ಮನೆತನದವರು. ಹೊನ್ನಮ್ಮ ಅವರು ತಮ್ಮ ಅಪಾರ ದೇಸೀ ಜ್ಞಾನ ವಿಶೇಷದ ಅಭಿವ್ಯಕ್ತಿಗಾಗಿ ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದವರು. ಬೆಂಗಳೂರು ವಿಶ್ವಿ ವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಹಾಗೂ ಜಾನಪದ ಅಧ್ಯಯನದಲ್ಲಿ ಪಿಎಚ್.ಡಿ. ಪಡೆದ ಟಿ. ಗೋವಿಂದರಾಜು, ಪ್ರಾರಂಭಕ್ಕೆ ಸಿನಿಮಾ ಕ್ಷೇತ್ರ, ಎಚ್. ಎಲ್. ನಾಗೇಗೌಡರೊಂದಿಗೆ ಜಾನಪದ ಟ್ರಸ್ಟ್ ಕಾರ್ಯದರ್ಶಿಯಾಗಿ, ಜಾನಪದ ಜಗತ್ತು ಪತ್ರಿಕಾ ಸಂಪಾದಕನಾಗಿ ದುಡಿದ ಹಿರಿಮೆ ಹೊಂದಿದ್ದಾರೆ. ಸರ್ಕಾರದ ವಿವಿಧ ...
READ MORE