‘ಮಣ್ಣಿನೊಳಗಣ ಮರ್ಮ’ ಲೇಖಕ ಚನ್ನಪ್ಪ ಅಂಗಡಿ ಅವರ ಮೊದಲ ಕತಾ ಸಂಕಲನ. ಬಿಡಿ ಕತೆಗಳಿಗೆ ತರಂಗ, ಸಂಯುಕ್ತ ಕರ್ನಾಟಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ದೊರೆತಿವೆ. ಇಲ್ಲಿಯ ಕತೆಗಳು ವಿವರಗಳ ಮೂಲಕ ಬೆಳೆಯುತ್ತ ಒಂದು ರೂಪಕದ ಕಡೆ ಚಲಿಸಲು ಚಡಪಡಿಸುತ್ತವೆ. ತೊರೆ ಎಂಬ ಕತೆಯಲ್ಲಿ ಅವರು ಈ ಸಾಧ್ಯತೆಗಳ ಕಡೆ ಕೈ ಚಾಚುತ್ತಾರೆ. ತೊರೆ ಎನ್ನುವುದು ಮೂರ್ನಾಲ್ಕು ಸ್ತರಗಳಲ್ಲಿ ಬೆಳೆಯುತ್ತದೆ. ಮುಗ್ದ ಬಾಲಕ ಸಿದ್ದುವಿನ ತೊರೆ ಎಮ್ಮೆಯ ತೊರೆ , ಸಿದ್ದುವಿನ ತಾಯಿಯ ತೊರೆ- ಏಕಕಾಲಕ್ಕೆ ಕತೆಯಲ್ಲಿ ಘಟಿಸುತ್ತವೆ, ಇಲ್ಲಿ ಎಲ್ಲರೂ ಯಾವು-ಯಾವುದರದೋ ತೊರೆಗೆ ಕಾಯುತ್ತಿದ್ದಾರೆ. ಇಂಥದ್ದೇ ಕತೆ- ಗೆರೆ. ಈ ಆಧುನಿಕ ಕುಟುಂಬದಲ್ಲಿ ಸಂಪ್ರದಾಯ ಮತ್ತು ಆಧುನಿಕ ಬದುಕಿನ ಸಂಘರ್ಷವಿದೆ. ಎಲ್ಲರ ಮಧ್ಯೆಯೂ ಒಂದು ದಾಖಲಾಗದ ಗೆರೆ ನಿರ್ಮಾಣಗೊಂಡಿದೆ. ಇಂತಹ ಕಂದಕದ ಸಂಕಟವನ್ನು ಸುಜಾತ ರಂಗೋಲಿಯನ್ನು ತನ್ನ ಹೊರ ಚಾಲನೆಯನ್ನಾಗಿ ಬಳಸಿಕೊಳ್ಳುವುದರ ಮೂಲಕ ಬಿಡುಗಡೆಗೊಳಿಸುತ್ತಾಳೆ. ಇಲ್ಲಿಯ ಎಲ್ಲ ಕತೆಗಳೂ ಹೀಗೆ ವಿಭಿನ್ನ ರೂಪಕಗಳ ಜೊತೆ ಬೆಳೆಯುತ್ತವೆ.
ಚನ್ನಪ್ಪ ಅಂಗಡಿ ಅವರು ಎಮ್ ಎಸ್ ಸಿ (ಕೃಷಿ) ಸಹಾಯಕ ಕೃಷಿ ನಿರ್ದೇಶಕರಾಗಿದ್ದಾರೆ. ಇವರು ಜನಿಸಿದ್ದು15.04.1970, ಬಮ್ಮನಹಳ್ಳಿ ಹಾವೇರಿ ಜಿಲ್ಲೆಯಲ್ಲಿ. ಮಂದ ಬೆಳಕಿನ ಸಾಂತ್ವನ, ಭೂಮಿ ತಿರುಗುವ ಶಬ್ದ (ಕವನಸಂಕಲನ), ಮಣ್ಣಿನೊಳಗಣ ಮರ್ಮ, ಕಿಬ್ಬದಿಯ ಕೀಲುಳುಕಿ (ಕಥಾಸಂಕಲನ), ಎದೆಯ ಒಕ್ಕಲಿಗ (ವೈಚಾರಿಕ), ಕೃಷಿ ಕಾರಣ ಸಂಪಾದನೆ : ಮಡಿಲು, ಕಾಯಕಯೋಗಿ, ಕದಂಬ, ಬಿತ್ತೋಣ ಹತ್ತಿ ಬೆಳೆಯೋಣ, ಗಿಡಗಂಟೆಗಳ ಕೊರಳು ಕೃತಿಗಳನ್ನು ರಚಿಸಿದ್ದಾರೆ. ಭೂಚೇತನ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಾವ್ಯ), ಮುದ್ದಣ ರತ್ನಾಕರವರ್ಣಿ ಅನಾಮಿಕ (ಕಸಾಪ) ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ...
READ MORE