ಲೇಖಕಿ ಜಾನಕಿ ಶ್ರೀನಿವಾಸ್ ಅವರ ‘ಸಂಪತ್ ಮತ್ತು ಇತರ ಕಥೆಗಳು’ ಸಣ್ಣಕತೆಗಳ ಸಂಗ್ರಹವಾಗಿದೆ. ಈ ಸಂಕಲನದಲ್ಲಿ ಸಂಗೀತ ವಿದ್ಯಾನಿಧಿ ಆರ್.ಕೆ.ಪದ್ಮನಾಭ ಅವರು ಬೆನ್ನುಡಿ ಬರೆದಿದ್ದು, ‘ಜಾನಕಿ ಶ್ರೀನಿವಾಸ್ ಅವರ ಸಂಪತ್ ಮತ್ತು ಇತರ ಕಥೆಗಳು’ ಇಂದಿನ ಯುವ ಜನಾಂಗದಲ್ಲಿ ಓದಿನ ಭರವಸೆಯನ್ನು ಹುಟ್ಟುಹಾಕುವಂತಿದೆ. ಇಲ್ಲಿ ಯಾವುದೇ ದೀರ್ಘ ಕತೆಗಳಿಲ್ಲ. ಕಥೆಗಳೆಲ್ಲಾ ಚಿಕ್ಕ ಚಿಕ್ಕ ರೂಪದ್ದೇ. ಐದೈದು ನಿಮಿಷಕ್ಕೆ ಮುಗಿದೇ ಹೋಗುತ್ತದೆ. ಹಾಗಾಗಿ ಓದುಗರಿಗೆ ಜಿಗುಪ್ಸೆ ತರುವಂತಹುದಲ್ಲ.ಇದೊಂದು ನವ್ಯ ಮಾದರಿಯ ಕಥಾ ಸಂಕಲನ. ಇಲ್ಲಿ ಸಂಕ್ರಾಂತಿಯಂತಹ ಕಥೆ ಎಳ್ಳನ್ನು ತಯಾರಿಸುವ ಪ್ರಕ್ರಿಯೆಯನ್ನೂ ಸೂಚಿಸುತ್ತದೆ. ಅದೂ ಅಲ್ಲದೆ ಎಳ್ಳನ್ನು ಬೀರುವ ಉದ್ದೇಶವನ್ನೂ ತಿಳಿಸುತ್ತದೆ. ಇವತ್ತಿನ ಹಾಗೆ ರೆಡಿಮೇಡ್ ಅಂದಿಗೆ ಸಮ್ಮತವೂ ಆಗುತ್ತಿರಲಿಲ್ಲ. ಲಭ್ಯವೂ ಇರುತ್ತಿರಲಿಲ್ಲ. ಹಾಗಾಗಿ ಎಳ್ಳನ್ನೂ ಕಲ್ಲಿನ ಮೇಲೋ ಗೋಣಿ ಚೀಲದ ಮೇಲೋ ಉಜ್ಜಲೇ ಬೇಕಾಗಿತ್ತು.ಅದೇ ಒಂದು ಸಂಭ್ರಮ, ಈ ಸಂಭ್ರವೇ ಹಬ್ಬವಾಗಿರುತ್ತಿತ್ತು. ಇಂತಹ ಸಾಮಾಜಿಕ ಮೌಲ್ಯವುಳ್ಳ ಕಥೆ ಸಂಕ್ರಾಂತಿಯಾದರೆ, ಶಾಂತಿ, ಸಹನ. ಅಪ್ಪಮ್ಮ ಇವೆಲ್ಲ ಭಾವನಾತ್ಮಕವಾದ ಕಥೆಗಳು, ಯಾವ ಕಥೆಯಲ್ಲೂ ಪಾತ್ರಗಳ ಸಂಖ್ಯೆ ಎರಡು ಅಥವಾ ಮೂರನ್ನು ಮೀರುವುದಿಲ್ಲ. ಅಂದರೆ ಪಾತ್ರಗಳು ಮರೆತುಹೋಗುವ ಸಾಧ್ಯತೆಗಳಿರುವುದಿಲ್ಲ. ಹಾಗಾಗಿ ಈ ಕಥೆಗಳೆಲ್ಲ ಕೈಬೀಸಿ ಕರೆದು ಓದಿಸಿಕೊಳ್ಳುತ್ತದೆ, ಕಥೆ ಸಾಹಿತ್ಯದಲ್ಲಿಇದೊಂದು ಹೊಸ ಹೆಜ್ಜೆ ಶ್ರೀಮತಿ ಜಾನಕಿ ಶ್ರೀನಿವಾಸ್ ಅವರು ಹೀಗಿದ್ದರೆ ಬಹುಶಃ ಈಗಿನ ಪೀಳಿಗೆಯವರೂ ಇಂತಹ ಕಥೆಗಳನ್ನು ಓದುತ್ತಾರೆ ಎಂಬ ಭರವಸೆ ನನಗಿದೆ’ ಎಂದಿದ್ದಾರೆ.
ಬೆಂಗಳೂರು ಮೂಲದವರಾದ ಜಾನಕಿ ಶ್ರೀನಿವಾಸ್ ಸಣ್ಣ ಕತೆಗಳಲ್ಲಿ ಹೆಸರು ಮಾಡಿರುವ ದಿ.ಕೆ.ಗೋಪಾಲಕೃಷ್ಣರಾಯರ ಮಗಳು. 28-08-1952 ರಂದು ಜನಿಸಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಗುರುಕುಲಂನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಅವರು, ಗಾಂಧೀಬಜಾರ್ ನ ಚಿನ್ನಿ ಸ್ಕೂಲ್ ನಲ್ಲಿ ಮಧ್ಯಮ, ಗಿರಿಜಾಂಬ ಮುಕುಂದ ದಾಸ್ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲ್ ವ್ಯಾಸಂಗ ಪೂರ್ತಿಗೊಳಿಸಿದರು. ಪಿಯುಸಿಯನ್ನು ಎಪಿಎಸ್ ಕಾಲೇಜು, ವಿಜಯ ಕಾಲೇಜಿನಲ್ಲಿ ಬಿ.ಎ ಹಾನರ್ಸ್ ಮಾಡಿ, ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ ಶಿಕ್ಷಣ ಗಳಿಸಿದರು. ತಮ್ಮ 60ನೇ ವಯಸ್ಸಿನಲ್ಲಿ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡ ಅವರು ಕಥೆಯೊಳಗೇಳು ಕಥೆ, ಸಂಪತ್ ಮತ್ತು ಇತರ ...
READ MORE