ಲೋಲ

Author : ಗುರುಪ್ರಸಾದ ಕಾಗಿನೆಲೆ

Pages 144

₹ 150.00




Year of Publication: 2021
Published by: ಅಂಕಿತ ಪುಸ್ತಕ
Address: 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್‍ ಮುಖ್ಯರಸ್ತೆ,ಬಸವನಗುಡಿ, ಬೆಂಗಳೂರು- 560 004
Phone: 080 26617100

Synopsys

ಗುರುಪ್ರಸಾದ್ ಕಾಗಿನೆಲೆ ಅವರ ‘ಲೋಲ’ ಕೃತಿಯು ಕಥೆಗಳ ಸಂಕಲನವಾಗಿದೆ. ಕೃತಿಯ ಪರಿವಿಡಿಯಲ್ಲಿ ವ್ಯಕ್ತಮಧ್ಯವು, ಲೋಲ, ಸಾಕ್ಷಿ, ಕ್ಲಾಸ್ ಆಫ್ 89, ಅಮೃತಮ್ಮ ಬಿದ್ದದ್ದು, ಆ ಬದಿ, ನಾನು ಮತ್ತು ನಾನು, ಒಸಾಮ ಬೆವರಿದ್ದ, ಊಬರ್ ಡ್ರೈವರ್ ಎಂಬ ಒಂಭತ್ತು ಶೀರ್ಷಿಕೆಗಳಿವೆ. ಕೃತಿ ಬಗ್ಗೆ ಖುದ್ದು ಲೇಖಕ ಗುರುಪ್ರಸಾದ್ ಕಾಗಿನೆಲೆ ಅವರು, “ವ್ಯಥೆಗಳೇ ಕತೆಗಳಾಗುವುದು ಅನ್ನುವುದಾದರೆ ಆಸ್ಪತ್ರೆಯೊಂದು ಕಥಾಸರಿತ್ಸಾಗರ. ಲೆಕ್ಕಾಚಾರದ ಬದುಕಿನಲ್ಲಿ ಮೈ ಮರೆತ ನಮ್ಮನ್ನು ಆಗಾಗ್ಗೆ ನಿಲ್ಲಿಸಿ ವಿಶಾಲ ದೃಷ್ಟಿಯನ್ನು ದಯಪಾಲಿಸಿ, ಹುಷಾರಾಗಿಸುವುದು ಆಸ್ಪತ್ರೆ. ಈ ಹೊಸ ನೋಟ ಅಥವಾ ಹೊಸ ಪಾಠವನ್ನು ಅದು ಕೊಡುವುದು ಕಥೆಗಳ ರೂಪದಲ್ಲಿ.ಜನರಲ್ ವಾರ್ಡಿನ ಕಬ್ಬಿಣದ ಮಂಚದ ತುದಿಗೆ ಕೂತ ಇಬ್ಬರು ಹಂಚಿಕೊಳ್ಳುವ ವಿವರಗಳೆಲ್ಲವೂ ಕತೆಗಳೇ. ಇಲ್ಲಿನ ಕತೆಗಾರ ಡಾಕ್ಟರೂ ಆಗಿರುವುದರಿಂದ ಬಹುತೇಕ ಕತೆಗಳ ಪರಿಸರ ಆಸ್ಪತ್ರೆಯೇ ಆಗಿದೆ ಮತ್ತು ಈ ಡಾಕ್ಟರು ಒಳ್ಳೆಯ ಕತೆಗಾರನೂ ಆಗಿರುವುದರಿಂದ ಇದರ ತುಂಬೆಲ್ಲಾ ಮುರಿದ ಮನಸ್ಸುಗಳ ಎಕ್ಸ್ ರೇ ಚಿತ್ರಗಳಿವೆ. ಆಸ್ಪತ್ರೆಯೊಳಗಿನ ಔಷಧದ ವಾಸನೆ, ಕಿಟಿಕಿಯಿಂದ ಕಾಣುವ ರಸ್ತೆಯ ಇತರ ವಾಸನೆಗಳೊಂದಿದೆ ಕಲೆತು ಒಂದು ವಿಚಿತ್ರ ಪರಿಮಳದ ವಿಚಿತ್ರ ಜಗತ್ತು ಈ ಕತೆಗಳಲ್ಲಿ ತೆರೆದುಕೊಂಡಿದೆ. ಕನ್ನಡದೂರಿನ ಚಿಕ್ಕಾಸ್ಪತ್ರೆಯಿಂದ ಅಮೆರಿಕಾದ ದೊಡ್ಡಾಸ್ಪತ್ರೆವರೆಗೂ ಹಬ್ಬಿರುವ ಈ ಜಗತ್ತು, ಹೊಸ ಕಾಲದ ಹೊಸ ಕಾಯಿಲೆಗಳನ್ನು ಪತ್ತೆ ಮಾಡಲೂ ಯತ್ನಿಸುತ್ತಿದೆ. ಕಲೆಯ ಉದ್ದೇಶವೂ ಲೋಕವನ್ನು ವಾಸಿ ಮಾಡುವುದೇ ಅನ್ನುವುದಾದರೆ, ಈ ಕತೆಗಳಲ್ಲಿ ಬದುಕಿನ ರುಜಿನಗಳನ್ನು ಸರಿಪಡಿಸುವ ‘ಗುಣ’ ಖಂಡಿತವಾಗಿಯೂ ಇದೆ. ದಿನಾ ರಾತ್ರಿ ಊಟದ ನಂತರ ಒಂದೊಂದು ಕತೆ ಸೇವಿಸಿದರೆ, ನಿಮ್ಮೆಲ್ಲಾ ನೋವುಗಳು ವಾಸಿಯಾಗುತ್ತವೆ ಎಂಬುದಕ್ಕೆ ‘ಸೆಕೆಂಡ್ ಒಪೀನಿಯನ್ನಿ’ನ ಅಗತ್ಯ ಖಂಡಿತಾ ಇಲ್ಲ!” ಎಂದಿದ್ದಾರೆ.

About the Author

ಗುರುಪ್ರಸಾದ ಕಾಗಿನೆಲೆ

ಗುರುಪ್ರಸಾದ್ ಕಾಗಿನೆಲೆ ಅವರು ಹುಟ್ಟಿದ್ದು ಶಿವಮೊಗ್ಗದಲ್ಲಿ, ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ. ಡೆಟ್ರಾನ್ಸ್‌ನ ವೇಯ್ಡ್ ಸ್ಟೇಟ್ ವಿಶ್ವವಿದ್ಯಾನಿಲಯ ಹಾಗೂ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ. ಸದ್ಯಕ್ಕೆ ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿ ವಾಸ, ನಾರ್ತ್ ಮೆಮೊರಿಯಲ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪ್ರಕಟಿತ ಕೃತಿಗಳು: 'ನಿರ್ಗುಣ' ಕಥಾಸಂಕಲನ, 'ವೈದ್ಯ, ಮತ್ತೊಬ್ಬ' ಲೇಖನ ಸಂಗ್ರಹ ಮತ್ತು 'ಗುಣ' ಕಾದಂಬರಿ, ಸಂಪಾದಿತ ಕಥಾಸಂಕಲನ 'ಆಚೀಚೆಯ ಕಥೆಗಳು'. ಇತ್ತೀಚಿನ ಕಾದಂಬರಿ 'ಹಿಜಾಬ್ ಸೇರಿದಂತೆ ಹಲವಾರು ...

READ MORE

Related Books