ಜೋಕರ್‌

Author : ಆರ್. ಎಂ. ಜಿ. ನಂದನ

Pages 98

₹ 140.00




Year of Publication: 2023
Published by: ಅಭಿನಂದನ ಪ್ರಕಾಶನ
Address: #ಇ ಡಬ್ಲೂ ಎಸ್- 2ನೇ ಕ್ರಾಸ್, 1ನೇ ಹಂತ, ಕಾಂಪ್ಲೆಕ್ಸ್ ಹತ್ತಿರ, ಕುವೆಂಪು ನಗರ, ಮೈಸೂರು
Phone: 8123332165

Synopsys

“ಜೋಕರ್‌” ಮತ್ತು ಇತರ ಕಥೆಗಳು ಆರ್. ಎಂ. ಜಿ. ನಂದನ ಅವರ ಚೊಚ್ಚಲ ಕೃತಿಯಾಗಿದೆ. ಇಲ್ಲಿ ಒಂದು ಮೂಢನಂಬಿಕೆಗಳ ಕುರಿತ ನಿಬಂಧದಂತಹ ಬರಹ ಒಂದನ್ನು ಬಿಟ್ಟರೆ ಉಳಿದುವು ಕಥೆಗಳ ಆಕಾರ ತಳೆಯಲು ಪ್ರಯತ್ನಿಸಿದವು. ಎಲ್ಲವೂ ನಮ್ಮ ಜನಪದ ಕಥೆಗಳನ್ನೇ ಆಧರಿಸಿದುವು. ಇವುಗಳಲ್ಲಿ ಕೆಲವು ಪ್ರಾಣಿಪಾತ್ರಗಳಿರುವ ಕಥೆಗಳಿವೆ. ಬೆರಗಿನಿಂದ ಜನಪದ ಕಥೆಗಳು ಬದುಕಿನ ವಿಸ್ತಾರದ ಅನುಭವಗಳನ್ನು ಒಡಲಲ್ಲಿ ಇಟ್ಟುಕೊಂಡಿರುತ್ತವೆ. ಅವನ್ನ ಹಳ್ಳಿಗರು ಒಮ್ಮೆ ರಚಿಸಿಯಾಗಿದೆ. ಅದು ಅವರ ಸ್ವತ್ತೆ, ಅಲ್ಲಿ ಒಂದು ಸಮೂಹ ಮನಸ್ಸು ಹಿನ್ನೆಲೆಯಲ್ಲಿರುತ್ತದೆ. ಅಂಥ ಕಥೆಗಳನ್ನು ನಾವು ಬರಹಕ್ಕೆ ಮತ್ತೆ ತರಬೇಕೆಂದು ಬಯಸಿದರೆ, ನಮ್ಮ ಕಾಲದ, ನಮ್ಮ ಅಗತ್ಯದ ತುಡಿತಗಳಿಗೆ ಅವನ್ನು ಹೊಂದಿಸಿಕೊಳ್ಳಬೇಕು, ಆಗಲೂ ಅವು ಜನಪದ ಶೈಲಿಯ ಕಥೆಗಳಾಗುತ್ತವೆ. ಮೂಲ ಜನಪದ ಕಥೆಗಳೇ ಇಂದಿನದಕ್ಕೂ ಸ್ಪಂದಿಸುವ ಹರವನ್ನು ಹೊಂದಿದಾಗ ಅವನ್ನು ಆಗ ತಂದುಕೊಳ್ಳಬಹುದು. ಪ್ರಸ್ತುತ ಸಂಕಲನದಲ್ಲಿ ಅನನುಭವಿಯಾದ ಲೇಖಕರು ಅಂಥ ಕಥೆಗಳನ್ನು ಹಾಗೇ ಇಟ್ಟಿದ್ದಾರೆ. ಹೆಚ್ಚಾಗಿ ಜನಪದ ಕಥೆಗಳನ್ನೆ ಆಧರಿಸಿರುವ ಈ ಪುಸ್ತಕ ಚಿಕ್ಕ ಮಕ್ಕಳಿಗೆ ಬಹಳ ಮುದ ನೀಡುತ್ತದೆ.

About the Author

ಆರ್. ಎಂ. ಜಿ. ನಂದನ
(15 April 1998)

ಲೇಖಕ ಆರ್. ಎಂ. ಜಿ. ನಂದನ ಅವರು ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ರಂಗಚಾರಿಹುಂಡಿ ಗ್ರಾಮದವರು. ಜನನ 1998 ಏಪ್ರಿಲ್ 15. ತಂದೆ ಮಹದೇವ, ತಾಯಿ ನಾಗಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ರಂಗಚಾರಿಹುಂಡಿಯಲ್ಲಿ, ಪ್ರೌಢ ಶಿಕ್ಷಣವನ್ನು ರಂಗನಾಥಪುರ ಹಾಗೂ ಮೈಸೂರು ಜಿಲ್ಲೆಯ ಕುವೆಂಪು ಪ್ರೌಢ ಶಾಲೆಯಲ್ಲಿ, ಪಿ.ಯು.ಸಿ. ಶಿಕ್ಷಣವನ್ನು ಬನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಮಹಾರಾಜ ಕಾಲೇಜಿನ ಕನ್ನಡ ಸಾಹಿತ್ಯ ಮತ್ತು ಜಾನಪದ ವಿಭಾಗದಲ್ಲಿ ಬಿ.ಎ ಪದವಿಯನ್ನು ಪಡೆದಿದ್ದಾರೆ. ಕೃತಿಗಳು: 'ಜೋಕರ್ ಮತ್ತು ಇತರ ಕಥೆಗಳು'   ...

READ MORE

Related Books