ಲೇಖಕರು ತಮ್ಮ ಬದುಕಿನ ಅನುಭವದಿಂದ ಕಟ್ಟಿಕೊಡುವ ಕಥೆಗಳು ನಮ್ಮ ಅನುಭಾವಕ್ಕೆ ಕೊಂಡೊಯ್ಯುತ್ತವೆ. ಇದರಲ್ಲಿ ಒಟ್ಟು ಎಂಟು ಕಥೆಗಳಿದ್ದು ಭಾಷಾ ಸೊಗಡಿನಲ್ಲಿ ಭಾವಸೂಕ್ಷ್ಮತೆಯನ್ನು ಇಲ್ಲಿ ತೆರೆದಿಟ್ಟಿದ್ದಾರೆ.
ಜನಸಾಮಾನ್ಯರ ಬದುಕಿನ ಅಸಾಮಾನ್ಯ ಸ್ಥಿತಿ–ಗತಿಗಳನ್ನು ಇಲ್ಲಿಯ ಕಥೆಗಳ ಪಾತ್ರಗಳಲ್ಲಿ ಕಾಣಬಹುದು. ಮನುಷ್ಯ ಸಂಬಂಧಗಳ ಪ್ರಸಕ್ತ ಕಾಲಮಾನದ ಸ್ಥಿತಿ; ಮೌಢ್ಯ, ಸ್ವಾರ್ಥಕ್ಕೆ ಸಿಲುಕಿ ನರಳುವ ವ್ಯಕ್ತಿಯ ಸ್ಥಿತಿ, ಕೌಟುಂಬಿಕ ಬಿರುಕು ಮತ್ತು ಅವಹೇಳನದ ಮಾತುಗಳನ್ನು ತನ್ನ ತೆಕ್ಕೆಯಲ್ಲಿ ಆವಾಹಿಸಿಕೊಂಡು ತೆರೆದಿಡುವತ್ತ ಸಾಗುತ್ತವೆ.
ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ದೊರೆತಿದೆ.
ಕಥೆಗಾರ ಹಾಗೂ ಅನುವಾದಕ ಬಸು ಬೇವಿನಗಿಡದ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಬೇಂದ್ರೆ ಕಾವ್ಯ ಪ್ರಬಂಧ ಮಂಡನೆ ಮಾಡಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ತಾಯವ್ವ, ಬಾಳೆಯ ಕಂಬ, ಹೊಡಿ ಚಕ್ಕಡಿ, ಉಗುಳುಬುಟ್ಟಿ , ನೆರಳಿಲ್ಲದ ಮರ, ಬೀಳದ ಗಡಿಯಾರ (ಕಥಾ ಸಂಕಲನಗಳು), ಕನಸು, ಇಳೆಯ ಅರ್ಥ (ಕವನ ಸಂಕಲನಗಳು), ದಕ್ಕದ ಕಾಡು (ಅನುವಾದಿತ ಕಥೆಗಳ ಸಂಕಲನ) ಬಿ.ಎ. ಸನದಿ (ಜೀವನಚಿತ್ರ) , ನಾಳೆಯ ಸೈರ್ಯ, ಓಡಿ ಹೋದ ಹುಡುಗ ...
READ MOREದೇಸಿ ಭಾಷೆಯ ಕತೆಗಳು-ಉದಯವಾಣಿ-ಪ್ರಜ್ಞಾ ಮತ್ತೀಹಳ್ಳಿ
ಕಥೆ ಕಟ್ಟುವ ಶೈಲಿಗಳು ಹಲವು. ಅವುಗಳಲ್ಲಿ ಬದುಕಿನ ಅನುಭವದಿಂದ ಕಟ್ಟಿಕೊಡುವ ಕಥನ ಅಥವಾ ಬರಹಗಳು ಆಪ್ತಭಾವ ಮೂಡಿಸುತ್ತವೆ. ಬದುಕಿನಲ್ಲಿ ನಡೆದ ಯಾವುದೋ ಘಟನೆಗಳು, ಅಂದಿನ ಸ್ಥಿತಿ–ಗತಿ, ವ್ಯವಸ್ಥೆ, ಸ್ಥಳೀಯ ಭಾಷಾ ಸೊಗಡು ಪರಿಚಯಿಸುವಲ್ಲಿ ಬರಹಗಾರರು ಜಾಣ್ಮೆ ವಹಿಸಿದರೆ ಮತ್ತು ಪಾತ್ರಗಳನ್ನು ಕಟ್ಟುವಲ್ಲಿ ಸೂಕ್ಷ್ಮತೆ ಕಾಯ್ದುಕೊಂಡರೆ ಆ ಕಥೆ ಅಥವಾ ಬರಹ ಅಲ್ಲಿ ಮೊದಲ ಗೆಲುವು ಸಾಧಿಸಿದಂತೆ. ಲೇಖಕ ಬಸು ಬೇವಿನಗಿಡದ ಅವರ ‘ನೆರಳಿಲ್ಲದ ಮರ’ ಕಥಾ ಸಂಕಲನದಲ್ಲೂ ಭಾಷಾ ಸೊಗಡು, ಪಾತ್ರಗಳ ಸೂಕ್ಷ್ಮತೆ ಅಡಗಿದೆ. ಇದರಲ್ಲಿ ಎಂಟು ಕಥೆಗಳಿವೆ. ಜನಸಾಮಾನ್ಯರ ಬದುಕಿನ ಅಸಮಾನ್ಯ ಸ್ಥಿತಿ–ಗತಿಗಳನ್ನು ಇಲ್ಲಿನ ಕಥೆಗಳ ಪಾತ್ರಗಳಲ್ಲಿ ಕಾಣಬಹುದು. ಮನುಷ್ಯ ಸಂಬಂಧಗಳ ಪ್ರಸಕ್ತ ಕಾಲಮಾನದ ಸ್ಥಿತಿ; ಮೌಢ್ಯ, ಸ್ವಾರ್ಥಕ್ಕೆ ಸಿಲುಕಿ ನರಳುವ ವ್ಯಕ್ತಿಯ ಸ್ಥಿತಿ, ಕೌಟುಂಬಿಕ ಬಿರುಕು ಮತ್ತು ಅವಹೇಳನದ ಮಾತುಗಳ ಪರಿಚಯ ‘ನೆರಳಿಲ್ಲದ ಮರ’ದಲ್ಲಿ ಓದಿಗೆ ದಕ್ಕುತ್ತದೆ. ಬದುಕಿನಲ್ಲಾಗುವ ಹೊಸ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನೋಭಾವದಲ್ಲಾಗುವ ತೊಡಕುಗಳು, ಹೊಸತು– ಹಳೆಯದರ ಸಂಘರ್ಷವನ್ನು ‘ತುಳುಕಿ ಹೋಗಿತ್ತ’ ಕಥೆ ಚಿತ್ರಿಸಿದೆ. ಎಂಟೂ ಕಥೆಗಳಲ್ಲೂ ವಿಭಿನ್ನತೆ ಇದೆ.
15 ಡಿಸೆಂಬರ್ 2019
ಕೃಪೆ : ಪ್ರಜಾವಾಣಿ
-----
ಗ್ರಾಮ್ಯ ಸೊಗಡಿನ ಜೀವಂತ ಕಥನ; ನೆರಳಿಲ್ಲದ ಮರ - ಮಲ್ಲಿಕಾರ್ಜುನ್ ಶೆಲ್ಲಿಕೇರಿ - ಬುಕ್ ಬ್ರಹ್ಮ