ಜಿ.ಪಿ. ರಾಜರತ್ನಂ ಅವರ ಕಥೆಗಳ ಸಂಕಲನ-ಕರಿಯ ಕಂಬಳಿ ಮತ್ತು ಇತರೆ ಕಥೆಗಳು. ಬೆಳದಿಂಗಳು, ಕರಿಯ ಕಂಬಳಿ, ವಸೂಲಿ, ಕೆಸರಿನ ಕಮಲ, ಅವಳ ಗಂಡ, ಕಪ್ಪಾದದ್ದೂ ಬಿಳುಪಾದದ್ದೂ ಹೀಗೆ ಒಟ್ಟು 13 ಕಥೆಗಳು ಈ ಸಂಕಲನದಲ್ಲಿವೆ. ಮೊದಲಿನ ಏಳೂ ಕಥೆಗಳು ಸ್ವಂತದ್ದು, ನಂತರದ ಎರಡು ಕಥೆಗಳು ರಷ್ಯನ್ ಕಥೆಗಳ ರೂಪಾಂತರ, ಕಡೆಯ ನಾಲ್ಕು ಕಥೆಗಳು ಫ್ರಾನ್ಸ್ ದೇಶದ ವಿಡಂನಾಕಾರ, ಸಾಹಿತಿ ಹಾಗೂ ರಾಜಕಾರಣಿ ವಾಲ್ಟೇರ್ ಅವರ ನಾಲ್ಕು ಕಥೆಗಳ ಅನುವಾದವಾಗಿವೆ ಎಂದು ಲೇಖಕರು ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE