ಅರೇಬಿಯನ್ ನೈಟ್ ಭಾಗ-2

Author : ಜಿ. ಶರಣಪ್ಪ

Pages 356

₹ 425.00




Year of Publication: 2019
Published by: ಸೃಷ್ಟಿ ಪಬ್ಲಿಕೇಷನ್ಸ್
Address: #1445, 3ನೇ ಕ್ರಾಸ್, ಕಾರ್ಪೋರೇಷನ್ ಕಾಲೋನಿ, ಗೋವಿಂದರಾಜನಗರ, ಬೆಂಗಳೂರು-560079
Phone: 9840998632

Synopsys

ಅರೇಬಿಯನ್ ನೈಟ್ ಭಾಗ-2, ಇಂಗ್ಲಿಷ್ ಕಥಾ ಸಂಕಲನದ ಕನ್ನಡಾನುವಾದ. ಈ ಎಲ್ಲ ಕಥೆಗಳಲ್ಲಿ ಭ್ರಾಂತಿ ಮತ್ತು ಗಳಿಗೆಗೊಂದು ರೀತಿಯ ಮತಿ ಭ್ರಮಣೆಯಿಂದ ಕೂಡಿದಂತಹ ಕಥಾ ವಸ್ತುಗಳನ್ನು ಒಳಗೊಂಡಿವೆ. 

ಇಂಡಿಯಾ ದೇಶದ ರಾಜ ಶಹ್ರಿಯಾದ್ ತನ್ನ ಹೆಂಡತಿಯ ಅವಿಧೇಯತೆ ಮತ್ತು ಕಾಮ ಕ್ರೀಡೆಗಳ ಅವಾಂತರಗಳನ್ನು ಕಣ್ಣಾರೆ ನೋಡಿ ಕೋಪೋದ್ರೇಕನಾಗಿ ಅವಳ ಶಿರಚ್ಛೇದನವನ್ನು ಮಾಡಿಸುತ್ತಾನೆ. ಇದಾದ ನಂತರ ಎಲ್ಲ ಹೆಂಗಸರು ಇಷ್ಟೇ ಎಂದುಕೊಂಡು ಎಲ್ಲ ಸ್ತ್ರೀ ಜನಾಂಗದ ವಿರುದ್ಧ ಸೇಡನ್ನು ತೀರಿಸಿಕೊಳ್ಳಲು ತೀರ್ಮಾನಿಸುತ್ತಾನೆ.

ಆ ಕಾರಣದಿಂದಾಗಿ ಪ್ರತಿ ರಾತ್ರಿ ಒಬ್ಬ ಸುರಸುಂದರಿಯಾದ ಹುಡುಗಿಯನ್ನು ಮದುವೆಯಾಗಿ ಅವಳನ್ನು ಅನುಭವಿಸಿ,  ಬೆಳಗಾದ ಕೂಡಲೇ ಅವಳ ಶಿರಚ್ಛೇದನ ಮಾಡಿಸುತ್ತಾನೆ. ಕೊನೆಗೆ ಎಂಥಾ ಘಟ್ಟಕ್ಕೆ ತಲುಪಿದನೆಂದರೆ ನಾಡಿನಾದ್ಯಂತ ಅವನಿಗೆ ಸರಿ ಹೊಂದುವಂಥ ಹುಡುಗಿಯರೇ ದೊರೆಯದಂತಾಗುತ್ತಾರೆ. ಅವನ ಮಂತ್ರಿಯ ಮಗಳು ಶಹರ್‌ಜಾದ್‌ಳ ಹೊರತಾಗಿ ಮತ್ತಿನ್ಯಾರೂ ಅವನಿಗೆ ಸರಿಯಾಗಿ ಹೊಂದುವಂಥವರು ಇರಲೇ ಇಲ್ಲ. ಆಗ ಮಂತ್ರಿಗೆ ಬೇರೆ ದಾರಿ ಇಲ್ಲದೆ ತನ್ನ ಮಗಳನ್ನೇ ರಾಜನಿಗೆ ನೀಡುತ್ತಾನೆ. ಶಹರ್‌ಜಾದ್ ಅಪ್ರತಿಮ ಸುಂದರಿ, ಮಹಾ ಬುದ್ದಿವಂತೆ. ರಾಜನಿಗೆ ಮನ ತಣಿಸುವಂತಹ ಕತೆಗಳನ್ನು ಕೇಳುವುದರಲ್ಲಿ ಬಹಳ ಆಸಕ್ತಿ ಇದೆ ಎಂದು ತಿಳಿದುಕೊಳ್ಳುತ್ತಾಳೆ. ಆ ಕಾರಣದಿಂದಾಗಿ ಪ್ರತೀ ರಾತ್ರಿ ಅವನಿಗೆ ಒಂದೊಂದು ಕತೆಯನ್ನು, ಅದರ ಅಂತಿಮ ಭಾವೋದ್ರೇಕದ ಘಟ್ಟವನ್ನು ಮಾತ್ರ ಬೆಳಗಾಗುವ ತನಕ ಕಾದು ಹೇಳುತ್ತಿರುತ್ತಾಳೆ, ಕತೆಯ ಅಂತ್ಯವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ರಾಜ ಅವಳ ಕೊಲೆಯನ್ನು ಹಾಗೇ ಮುಂದೂಡುತ್ತಾ ಹೋಗುತ್ತಾನೆ. ಹೀಗೆ ಆರಂಭಿಸಿದ ಕಥೆಗಳ ಸರಣಿ ಬರೋಬ್ಬರಿ 1001 ರಾತ್ರಿಗಳನ್ನು ಕ್ರಮಿಸಿದವು.

ಈ ಕಾಲಾವಧಿಯಲ್ಲಿ ಶಹರ್‌ಜಾದ್‌ ಅವನಿಗೆ ಮೂರು ಜನ ಮಕ್ಕಳನ್ನು ಹೆತ್ತು ಕೊಡುತ್ತಾಳೆ. ಇಂಡಿಯಾ, ಪರ್ಷಿಯಾ, ಮತ್ತು ಅರೇಬಿಯಾದಲ್ಲಿ ತನ್ನ ಮೂಲವನ್ನಿರಿಸಿಕೊಂಡ ಈ ಕತೆಗಳು ಪಂಚತಂತ್ರ ಮತ್ತು ಜಾತಕ ಕತೆಗಳ ಪರಂಪರೆಯಲ್ಲಿ ನಿರೂಪಿಸಲ್ಪಟ್ಟಿವೆ. ಸಾಹಸ ಮತ್ತು ನಿಗೂಢತೆಯನ್ನು ಕಾಪಾಡಿಕೊಂಡು ಮಂತ್ರ ಮುಗ್ಧ ಜಮಖಾನ್‌ಗಳ ಮೇಲಕ್ಕೆ ಜನಿ ಮತ್ತು ಜನ್ ಪರಿಸರಕ್ಕೆ ತಳ್ಳಿ ಬಿಡುತ್ತವೆ. ಇಲ್ಲಿ ಎಂದೆಂದೂ ಮರೆಯಲು ಸಾಧ್ಯವಿಲ್ಲದ 'ನಾವಿಕ ಸಿಂದಾ ಬಾದ್', ‘ಅಲ್ಲಾವುದ್ದೀನ್ ಮತ್ತು ಅವನ ಅದ್ಭುತ ದೀಪ', 'ಆಲಿಬಾಬ ಮತ್ತು ನಲವತ್ತು ಕಳ್ಳರು...' ಹೀಗೆ ಇನ್ನೂ ಸಾಕಷ್ಟು ಜನಪ್ರಿಯ ಕಥೆಗಳು ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.

About the Author

ಜಿ. ಶರಣಪ್ಪ

ಜಿ. ಶರಣಪ್ಪ ಇಂಗ್ಲಿಷ್ ಪ್ರಾಧ್ಯಾಪಕರು. ಹಿರಿಯೂರು ತಾಲೂಕಿನ ಸೂರಗೊಂಡನಹಳ್ಳಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ಸಕ್ರಿಯ. ಬೆಂಗಳೂರಿನ ಹೆಚ್.ಎಸ್.ಆರ್. ಬಡಾವಣೆಯಲ್ಲಿ ಸದ್ಯ ವಾಸ. ಈವರೆಗೆ  ಅನುವಾದ, ಕಥೆ, ಮಕ್ಕಳ ಸಾಹಿತ್ಯ, ವೈಚಾರಿಕ ಹೀಗೆ ಸುಮಾರು 34 ಪುಸ್ತಕಗಳು ಪ್ರಕಟವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ...

READ MORE

Related Books