ಹನ್ನೆರಡು ಕತಾ ಕುಸುಮಗಳು ಹಾಗೂ ಉಪಕತೆಗಳಿರುವ ಸಂಕಲನ ‘ಡಜ಼ನ್ ಕತೆಗಳು’. ಗುಣವಂತ ಮಂಜು ಅವರ ಈ ಕೃತಿಯು ನಗರ-ಗ್ರಾಮೀಣ ಜನರ ಬದುಕು, ಬವಣೆ, ಭಾವನೆಗಳ ಹೊಯ್ದಾಟ -ತೊಯ್ದಾಟಗಳು ಕಥೆಯ ಜೀವಾಳವಾಗಿವೆ. ಯುವಕರ ಕಾಲೇಜು ದಿನಗಳ ಬದುಕು ಕುರಿತು ಬರೆದ ಕತೆಗಳು ಇಲ್ಲಿವೆ. ವಿಷಯ ವೈವಿಧ್ಯತೆ, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕತೆಗಳು ಓದುಗರ ಗಮನ ಸೆಳೆಯುತ್ತವೆ.
ಗುಣವಂತ ಮಂಜು ಎಂತಲೇ ಪರಿಚಿತರಾಗಿರುವ ನಿರ್ದೇಶಕ ಬರಹಗಾರ ಎಸ್.ಎನ್. ಮಂಜುನಾಥ್ ಅವರ ಹುಟ್ಟೂರು ಕೋಲಾರ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಧಾರಾವಾಹಿ ಸಂಚಿಕೆಗಳ ಬರವಣಿಗೆ ಮತ್ತು ನಿರ್ದೇಶನವನ್ನು ಮಾಡಿದ್ದಾರೆ. ಸಾಹಿತ್ಯಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಕೃತಿಗಳು: ಮತ್ತೊಂದು ಸ್ವಾತಂತ್ಯ್ರ, ಅಂದು ಆಂಗ್ಲರು ಇಂದು ಉಗ್ರರು, ಸ್ನೇಹಿತೆ, ಡಜನ್ ಚಿತ್ರಗಳು, ಒಬ್ಬ ವ್ಯಕ್ತಿ ನೂರು ಮುಖ, ಗಾಂಧಿ ಊರಿನಲ್ಲಿ, ಉತ್ಸವ, ಡಮರುಗ ಮುಂತಾದವು. ಮೈಲಾರಿ, ತಾಜ್‌ಮಹಲ್, ಚಾರ್‌ಮಿನಾರ್, ಕೋಕೋ, ಲಕ್ಷ್ಮೀ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬರಹ ...
READ MORE