ಖ್ಯಾತ ಲೇಖಕ ಡಿ.ಎಸ್. ಚೌಗಲೆ ಅವರ ಕಥಾ ಸಂಕಲನ-‘ಸೀಮಿಗೊಂದ ಆಟಾಟಿ. ನೀನೊಲಿದಂತೆ ಕಾಯ ಪ್ರಾಣವೋ, ತನು ಕರಗಿ, ಹೀಗೊಂದು ಗ್ರಾಮ ಪುರಾಣ, ಝಣಝಣ ಕಾಂಚಾಣ, ಸೀಮಿಗೊಂದ ಆಟಾಟಿ, ಪದ್ದುಕಾಕು, ಸುಳಿವಾತ್ಮ ಗಂಡು ಅಲ್ಲ ಹೆಣ್ಣು ಅಲ್ಲ, ಆರ್ಟ್ ಈಸ್ ಮೈ ರಿಲಿಸನ್ ಹೀಗೆ ಒಟ್ಟು 8 ಕಥೆಗಳು ಸಂಕಲನಗೊಂಡಿವೆ. ಇಲ್ಲಿಯ ಕಥೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕೃತಿಗೆ ಕೃತಿಕಾರರು ಬರೆದ ‘ನನ್ನ ಮಾತು’ ಪ್ರಸ್ತಾವನೆಯಲ್ಲಿ ‘ಒತ್ತೊತ್ತಿ ಬರುವ ಅನುಭವಗಳು ಪ್ರಪಂಚಕ್ಕೆ ಕನ್ನಡಿಯಾಗಲು ಕತೆಯ ರೂಪ ಬಹು ಸೂಕ್ತವೆನಿಸಿತು. ಹೀಗಾಗಿ ಎಂಟು ಕತೆಗಳು ರೂಪಗೊಂಡವು. ಇವುಗಳನ್ನು ಸೃಜಿಸುವ ಸಂದರ್ಭಗಳ ನಡುವೆ ಕಾಲದ ಅಂತರಗಳಿವೆ. ಈ ಅಂತರವಿದ್ದರೂ ಸಾರ್ವಕಾಲಿಕವೆನ್ನಿಸುವ ಮೌಲ್ಯಗಳಿವೆ ಎಂದು ನಾನು ನಂಬಿದ್ದೇನೆ’ ಎಂದು ತಮ್ಮ ಕತೆಗಳ ಸ್ವರೂಪ-ಸ್ವಭಾವ ಕುರಿತು ಹೇಳಿಕೊಂಡಿದ್ದಾರೆ.
ಕೃತಿಗೆ ಬೆನ್ನುಡಿ ಬರೆದ ಕಥೆಗಾರ ವಿವೇಕ ಶಾನಭಾಗ ‘ಈ ಸಂಕಲನದ ಕತೆಗಳು ಲೇಖಕರ ಆಸಕ್ತಿಗಳ ವಿಶಾಲ ವ್ಯಾಪ್ತಿಗೆ ಸಾಕ್ಷಿಯಾಗಿವೆ. ತಲೆಮಾರುಗಳ ಅಂತರ, ಮೌಲ್ಯಗಳ ತಡಕಾಟ, ಬದಲಾದ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳ ಪತನದ ವಸ್ತುಗಳಿವೆ. ಯಾವುದೇ ಕಥಾವಸ್ತುವಿರಲಿ, ಅದರ ವೈರುಧ್ಯಗಳ ಸಮೇತ ಮಾನವೀಯ ನೆಲೆಯಿಂದ ನೋಡುವುದು ಚೌಗಲೆ ಅವರ ಕಥೆಗಳ ಹೆಚ್ಚುಗಾರಿಕೆಯಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಇವು ಬಹುಚರ್ಚಿತ ನಾಟಕಗಳು. 1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ...
READ MORE