‘ನನ್ನಕ್ಕ ನಿಲೂಫರ್’ ಮಿತ್ರಾ ವೆಂಕಟ್ರಾಜ ಅವರ ಕಥಾಸಂಕಲನವಾಗಿದೆ. ‘ಕುಂದಾಪ್ರ ಕನ್ನಡ’ದ ಕಥೆಗಳೂ ಇಲ್ಲಿವೆ. ಕತೆಗಾರ್ತಿ ತಮ್ಮ ಕತೆಗಳಲ್ಲಿ ಅನ್ವೇಷಿಸುವ ವಿಷಯಗಳು, ಪಾತ್ರಗಳ ಸಾಮಾಜಿಕ ಕೌಟುಂಬಿಕ ನೆಲೆಗಳು ಮತ್ತು ಬದಲಾಗುವ ಸಾಮಾಜಿಕ ಪರಿವರ್ತನೆಯ ಪ್ರಭಾವಗಳನ್ನು ಕಾಣಬಹುದಾಗಿದೆ. ಕಥೆಗಳು ಮುಗಿದರೂ ಕೂಡ ಕಥಾವಸ್ತುಗಳು ನಮ್ಮೊಳಗೆ ಆವರಿಸಿ, ಮನಸ್ಸಿನ ತಟದಲ್ಲಿ ನೆಲೆಯೂರುತ್ತದೆ.
ಈ ಕಥಾ ಸಂಕಲನದಲ್ಲಿ ಈದ್ ಕಾ ಚಾಂದ್, ಮಲ್ಲಿಗೆ ಮಾಲೆಯ ಕಾರು, ರೈಲುಪಟ್ಟಿಯ ಗೆರೆಗಳು, ನನ್ನಕ್ಕ ನಿಲೂಫರ್, ಪ್ರೀತಿ.com, ಹೊಗೆಯ ಸುಳಿವಿಲ್ಲ, ಮಿನುಗೆಲೆ ಮಿನುಗೆಲೆ ನಕ್ಷತ್ರ, ಎರಡನೇ ಅಂಕ, ಕಿರುಕತೆಗಳಾದ; ದೇವ್ರ ನಡಸ್ತ, ಪಟ್ಟೆ ಸೀರೆ, ಜಿತಂ ಜಿತಂ ಜೀರಿಗೆ, ಮೆರೀನ್ ಡ್ರೈವ್ ನ ದಂಡೆಯಲ್ಲಿ ಒಂದು ಸಂಜೆ, ಅಡಿಯಷ್ಟು ಉದ್ದದ ನೆರಳು, ಕಲೆ, ಲಾಲಿಗುರನ್ ಹೂ, ಮುಳುಗುವ ಸೂರ್ಯನ ಕೆಂಪು ಬೆಳಕು ಕತೆಗಳನ್ನು ಕಾಣಬಹುದು.
ಕಥೆಗಾರ್ತಿ ಮಿತ್ರಾವೆಂಕಟ್ರಾಜ್ ಅವರು 1948 ಜುಲೈ 11 ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ‘ರುಕುಮಾಯಿ, ಹಕ್ಕಿ ಮತ್ತು ಅವಳು’ ಅವರ ಕಥಾಸಂಕಲನ, ಮೌಖಿಕ ಲೇಖನಗಳ ಸಂಕಲನ ಬೊಗಸೆಯಲ್ಲಿಟ್ಟು ಬೆಳಕು ತುಂಬಿ, ಮುಗಿಲು ಮಲ್ಲಿಗೆಯ ಎಟಕಿಸಿ ಮುಂತಾದ ಕೃತಿಗಳನ್ನು ರಚಿಸಿದ್ಧಾರೆ. ಕತೆಹೇಳೆ - ಮುಂಬೈ ಲೇಖಕಿಯರ ಕಥಾಸಂಕಲನ), ಬೆಳಕಿನೆಡೆಗೆ - ಮುಂಬೈ ಲೇಖಕಿಯರ ಲೇಖನಗಳ ಸಂಗ್ರಹ ಅವರ ಸಂಪಾದಿತ ಕೃತಿಗಳು. ಒಂದು ಬಸ್ಸಿಗೆ ಒಯ್ಯುವುದಿತ್ತು ಕಥೆಗೆ ದಿಲ್ಲಿಯ ಕಥಾಪ್ರಶಸ್ತಿ, ಹಕ್ಕಿ ಮತ್ತು ಅವಳು ಸಂಕಲನಕ್ಕೆ ರತ್ನಮ್ಮ ಹೆಗಡೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಾಷ್ಟ್ರೀಯ ಮಹಿಳಾವರ್ಷದ ಪ್ರಶಸ್ತಿ, ...
READ MORE