’ಬೊಗಸೆಯೊಳಗಿನ ಅಲೆ’ ಮಹಿಳೆಯ ಮೇಲಾಗುವ ಪುರುಷ ಜಗತ್ತಿನ ಶೋಷಣೆಯ ಪರಿಯನ್ನು ವಿವರಿಸುವ ಕತೆಗಳ ಸಂಕಲನ. ಇಲ್ಲಿನ ಕಥೆಗಳು ಕಟ್ಟಿದ ಕಥೆಗಳಾಗಿರದೆ ಹುಟ್ಟಿದ ಕಥೆಗಳಾಗಿವೆ. ಹಾಗೆ ಹುಟ್ಟಿದ ಕಥೆಯ ಬೀಜವೇ ಮರವಾಗಿ ರೆಂಬೆ ಕೊಂಬೆಗಳನ್ನು ಚಾಚುತ್ತಿರುವಾಗಲೇ ಅಲ್ಲಿಯ ದಟ್ಟವಾದ ವಿಷಾದವು ಹೃದಯಕ್ಕೆ ಬೇರಿನಂತೆ ಇಳಿಯುತ್ತಲೇ ಇರುತ್ತದೆ. ಇಲ್ಲಿಯ ಬಹುತೇಕ ಕಥೆಗಳ ವಸ್ತು ಮನುಷ್ಯನ ಪ್ರವೃತ್ತಿಯ ಸುತ್ತಲೇ ಹುಟ್ಟಿಕೊಂಡಿವೆ.
ಉಪನ್ಯಾಸಕರಾಗಿರುವ ಮಂದಾರವಲ್ಲಿ ಎಂ. ಆರ್.ಅವರು ಜನಿಸಿದ್ದು 1961 ಮೇ 15 ರಂದು. ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿರುವ ಇವ ಪ್ರಮುಖ ಕೃತಿಗಳೆಂದರೆ ಗೊಂದಲಗಳ ನಾಡಿನಲ್ಲಿ, ನವಸಾಕ್ಷರ ಸಾಹಿತ್ಯ ಪರಿಸರ ಎಂದರೇನು? ಮುಂತಾದವು. ...
READ MORE