ಲೇಖಕಿ ಸುಮಾ ಕಿರಣ್ ಅವರ ಕೃತಿ ’ಶಕುನಿ’. ಆಕರ್ಷಕ ಮುಖಪುಟದೊಂದಿಗೆ ಹೊರಬಂದ ಈ ಕೃತಿಗೆ ರಾಮಶೇಷ ಎಸ್ ಎ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಶಕುನಿಯ ಮನಸ್ಸಿನ ಭಾವಗಳನ್ನು ಸಮರ್ಥವಾಗಿ ತರುವ ಮೂಲಕ ಕಥೆಗೆ ಮೆರುಗು ತಂದಿದ್ದಾರೆ. ಹಾಗೆಯೇ ಎಲ್ಲಿಯೂ ಕಥೆಯು ಋಣಾತ್ಮಕ ಹಾದಿಯನ್ನು ಹಿಡಿಯದಿರುವಂತೆ ಎಚ್ಚರಿಕೆ ವಹಿಸಿರುವುದನ್ನು ಶ್ಲಾಘಿಸಿದ್ದಾರೆ. ರಂಗಸ್ವಾಮಿ ಅವರು ಹೇಳುವಂತೆ, ಕಥೆ ಓದಿದಂತೆಲ್ಲಾ ನಾವು ಶಕುನಿಯ ಪರವಾಗಿ ನಿಲ್ಲುವಂತೆ ಮಾಡುತ್ತದೆ ಎಂದಿದ್ದಾರೆ. ಅಲ್ಲದೆ ಕವಿ, ಲೇಖಕ ಹರಿ ನರಸಿಂಹ ಉಪಾಧ್ಯ ಅವರು ಬೆನ್ನುಡಿಯನ್ನು ಬರೆದಿದ್ದಾರೆ.
ಬಸ್ರೂರಿನ ಮೂಡ್ಕೇರಿ ಮೂಲದವರಾದ ಸುಮಾ ಕಿರಣ್ ವೃತ್ತಿಯಲ್ಲಿ ಶಿಕ್ಷಕಿ. ಕವನ ಲೇಖನ, ಪ್ರಬಂಧ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಕ್ರಿಯರಾಗಿ ಬರೆಯುವುದು ಇವರ ಹವ್ಯಾಸ. ಸದ್ಯ ಜನಮಿಡಿತ ಪತ್ರಿಕೆಯ ಉಡುಪಿ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿ : ಶಕುನಿ ( ಕಾದಂಬರಿ 2022) ಇವರ ಅಸಂಖ್ಯ ಬರಹಗಳು ಜನಮಿಡಿತ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತವೆ. ಅಲ್ಲದೇ ವಿವಿಧ ಸಾಹಿತ್ಯ ಸಂಘಟನೆಗಳು ಇವರನ್ನು ಪುರಸ್ಕರಿಸಿ ಗೌರವಿಸಿರುತ್ತವೆ. ...
READ MORE