ಲೇಖಕಿ ಶೈಲಜಾ ಸುರೇಶ್ ಅವರು ಬರೆದ ಕತೆಗಳ ಸಂಕಲನವೇ-’ಬದುಕು ಬರಿಯ ಭ್ರಮೆಯೇ.... ಬದುಕೆಂದರೆ ಕೇವಲ ಹಣವನ್ನು ಅವಲಂಬಿಸಿಲ್ಲ. ಆದರೆ., ಅದೇ ಕಾರಣಕ್ಕೆ ಉಂಟಾಗುವ ತಲ್ಲಣಗಳು, ತಾಕಲಾಟಗಳನ್ನು ನಿರ್ಲಕ್ಷಿಸುವಂತೆಯೂ ಇಲ್ಲ. ಈ ಮಧ್ಯೆ, ಹೆಣ್ಣು ಅನುಭವಿಸುವ ನೋವು, ಅವಮಾನ, ಹಿಂಸೆ, ಅಸಹಾಯಕತೆ, ಶೋಷಣೆ ಎಲ್ಲವೂ ಇಲ್ಲಿಯ ಕಥೆಗಳ ವಸ್ತು. ಪಾತ್ರಗಳು, ಘಟನೆ-ಸನ್ನಿವೇಶಗಳನ್ನು ಹೆಣೆಯುವಲ್ಲಿ ಕಥೆಗಾರ್ತಿಯ ಕಲಾತ್ಮಕತೆ ಕಾಣಬಹುದು.
ಶೈಲಜಾ ಸುರೇಶ್ (ದಾಕ್ಷಾಯಿಣಿ ಎಚ್.), ಬಿ.ಎ. ಪದವೀಧರರು. 1964ರ ಅಕ್ಟೋಬರ್ 2 ರಂದು ಹಾಸನದಲ್ಲಿ ಜನನ. ತಂದೆ ಹೆಚ್. ಹನುಮಂತಪ್ಪ, ತಾಯಿ- ಸಾವಿತ್ರಮ್ಮ. ಕಾದಂಬರಿ : ಇಂದಿರಾ 2004, ಹೃದಯರಾಗ 2006, ಬಾಳಿನ ಹೊಂಬೆಳಕು 2008, ಕಥಾಸಂಕಲನ : ಹೊಂಗನಸು 2012ರಲ್ಲಿ ಪ್ರಕಟವಾಗಿವೆ. ಸಣ್ಣಕತೆ ಹಾಗೂ ನಾಟಕಗಳನ್ನು ರಚಿಸಿದ್ದು ಹವ್ಯಾಸಿ ಪತ್ರಕರ್ತೆ ಕೂಡ. ಆಕಾಶವಾಣಿ, ದೂರದರ್ಶನಕ್ಕಾಗಿ ಹಲವು ಬರೆಹಗಳನ್ನು ನೀಡಿದ್ದಾರೆ. ಅವರು ಲೇಖಕಿಯರ ಸಾಹಿತ್ಯ ವೇದಿಕೆಯ ಅಧ್ಯಕ್ಷರು. ಇವರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ದೇವರ ದಾಸಿಮಯ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಗೌರವಹುದ್ದೆ : ಹಾಸನ ಜಿಲ್ಲಾ ಕನ್ನಡ ಲೇಖಕಿಯರ ...
READ MORE