ನೆರೆಯ ಬಿಂಬಗಳು

Author : ಬಿ.ಎಸ್. ಮಯೂರ

Pages 100

₹ 75.00




Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805

Synopsys

ಭೌತ ವಿಜ್ಞಾನದ ನಿವೃತ್ತ ಅಧ್ಯಾಪಕಿಯಾಗಿರುವ ಬಿ. ಎಸ್. ಮಯೂರ ಅವರ ನೆರೆಯ ಬಿಂಬಗಳು ಕನ್ನಡ ಕಥಾ ಲೋಕದಲ್ಲಿ ಒಂದು ನವೀನ ಪ್ರಯೋಗವಾಗಿದೆ. ಸಮಾಜಶಾಸ್ತ್ರದಿಂದ ವಿಜ್ಞಾನದವರೆಗೆ, ಸ್ವದೇಶದಿಂದ ವಿದೇಶದ ಜೀವನ ರೀತಿಯವರೆಗೆ, ಸಾಂಸಾರಿಕ ಖುಷಿ, ವೇದನೆಗಳು ವೈವಿಧ್ಯಗಳೊಡನೆ ಆಧುನಿಕ ಜೀವನದ ದುರ್ಬಲ ಗಳಿಗೆಗಳು, ಸೂಕ್ಷ್ಮ ಮನಸ್ಸಿನ ನಿರಾಶೆಗಳು ಕಾಣುತ್ತದೆ. ಇಲ್ಲಿ ಒಟ್ಟು 21 ಕತೆಗಳಿವೆ. ವೇಂಕಟ ಲಕ್ಷ್ಮಿಯ ಹೋರಾಟದ ಬದುಕನ್ನು ತಿಳಿಸುವ ವೇಂಕಟ ಲಕ್ಷ್ಮಿ ಕತೆ, ಮುಗ್ಧ ಮಕ್ಕಳ ಬದುಕಿನ ಮೇಲೆ ಎರಗುವ ಪಾಲಕರ ಕೌರ್ಯವನ್ನು ಹೇಳುವ ಸನ್ಯಾಸಿ ಹೇಳದ ಕತೆ ಮತ್ತು ರಾಧಿಕಾ ಮತ್ತು ಅವಳ ಗೊಂಬೆಗಳು, ಕೌಟುಂಬಿಕ ಹೊಣೆಗಾರಿಕೆಯನ್ನು ತಿಳಿಸುವ ಏಳು ಮಲ್ಲಿಗೆ ತೂಕದವಳು, ಪೌರ್ವಾತ್ಯ, ಪಾಶ್ಚಿಮಾತ್ಯರ ದೃಷ್ಟಿಕೋನವನ್ನು ಪರಾಮರ್ಶಿಸುವ ಜವಾಬ್ದಾರಿ, ಆಧುನಿಕ ವಿಜ್ಞಾನದ ಆವಿಷ್ಕಾರವನ್ನು ಪುರಾಣದ ಕಥೆ ಕಲ್ಪನೆಗಳನ್ನು ಸಾಕಾರವಾಗಿಸುವ ವಿಜ್ಞಾನಿಗಳ ಕಾರ್ಯಕ್ಷಮತೆಯನ್ನು ಹೇಳುವ ಅಂಗೈಯಲ್ಲಿ ಬ್ರಹ್ಮಾಂಡ ಹೀಗೆ ವೈವಿಧ್ಯಮಯ ಜಗತ್ತೊಂದನ್ನು  ಈ ಕೃತಿಯಲ್ಲಿರುವ ಕಥೆಗಳು ಕಟ್ಟಿಕೊಡುತ್ತದೆ.

About the Author

ಬಿ.ಎಸ್. ಮಯೂರ
(05 October 1936)

ಬರಹಗಾರ್ತಿ ಮಯೂರ ಬಿ.ಎಸ್ ಅವರು 1936 ಅಕ್ಟೋಬರ್‌ 05 ಮೈಸೂರಿನಲ್ಲಿ ಜನಿಸಿದರು. ’ಶಬ್ದಶಾಸ್ತ್ರ’ ಎಂಬ ಪಠ್ಯಪುಸ್ತಕ, ’ಸರ್ ಐಸಾಕ್ ನ್ಯೂಟನ್, ಅಲ್ಬರ್ಟ್ ಅಬ್ರಾಹಂ ಮೈಕೆಲ್ಸನ್, ಥಾಮಸ್ ಅಲ್ವ ಎಡಿಸನ್, ಅಲೆಕ್ಸಾಂಡರ್ ಗ್ರಹಾಂ ಬೆಲ್, ಫಿಗ್ಗೆ ಮೋರ್, ಆಲ್‌ಫ್ರೆಡ್ ನೊಬೆಲ್ ಪರಸ್ತೃತನ ವ್ಯಕ್ತಿಚಿತ್ರಗಳನ್ನು ರಚಿಸಿದ್ಧಾರೆ.  ...

READ MORE

Related Books