ಜೀವನ” ಎಂಬ ಕೃತಿಯು ಕೃಷ್ಣ ಕುಮಾರರು ಬರೆದ ಒಟ್ಟು ಎಂಟು ಸಣ್ಣ ಕತೆಗಳ ಒಂದು ಗುಚ್ಚವಾಗಿದೆ. ಯಾವ ಕತೆಯೂ ಭಾವಗೀತೆಯ ಸನಿಹಕ್ಕೆ ನಿಲ್ಲಲು ಸಾಧ್ಯವೋ, ಯಾವುದು ತುಂಬಾ ಹತ್ತಿರಕ್ಕೆ ನಿಲ್ಲಬದೋ ಅದನ್ನು ಸಣ್ಣ ಕತೆ ಎಂದು ಕರೆಯಬಹುದು. ಇಲ್ಲಿ ಬರುವ ಯಾವ ಪಾತ್ರವಾಗಿರಲಿ ಅದಕ್ಕೆ ಪ್ರಾಮುಖ್ಯತೆ ಇರಕೂಡದು. ದೇಶ , ಕಾಲ, ಪಾತ್ರ, ವಸ್ತು , ಘಟನೆ ಇಲ್ಲಿ ಕಂಡು ಬಂದರೂ ಅದಕ್ಕೆ ಹೆಚ್ಚಿನ ಮಹತ್ವ ಇರುವುದಿಲ್ಲ. ಈ ಕೃತಿಯಲ್ಲಿರುವ ಒಟ್ಟು ಎಂಟು ಕಥೆಗಳಲ್ಲಿ ,ಪ್ರತಿಯೊಂದು ಕಥೆಯಲ್ಲಿ ಅವರ ತತ್ವನ್ನು ಸ್ಪುಟವಾಗಿ ಸ್ಟುರಿಸುತ್ತದೆ.
ಗಾಂಧಿವಾದಿ, ಸಾಹಿತಿ ಕೃಷ್ಣಕುಮಾರ ಕಲ್ಲೂರ ಅವರು 1909 ಡಿಸೆಂಬರ್ 21ರಂದು ಜನಿಸಿದರು. ಗದಗ ಜಿಲ್ಲೆಯ ಕಲ್ಲೂರ ಇವರ ಹುಟ್ಟೂರು. ತಾಯಿ ರಾಧಾಬಾಯಿ, ತಂದೆ ಅನಂತರಾವ್. ಮಾಧ್ಯಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಸಿದ ಇವರು ಗುಜರಾತಿನ ಪಾಡ್ರಾ ಹಾಗೂ ಬರೋಡದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಕಾಲೇಜು ದಿನಗಳಲ್ಲಿಯೇ ಕತೆ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಇವರ ಹಲವು ಕತೆಗಳು ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಜಯಕರ್ನಾಟಕ ಸಮರ್ಪಣ ಗೀತೆಗಳು, ಮಧುರ ಗಂಗೋತ್ರಿ, ತಿರುಗುಪ್ಪ, ಜಾಗೃತ ರಾಷ್ಟ್ರ ಇವರ ಪ್ರಮುಖ ಕೃತಿಗಳು. ಇವರು 1982ರಲ್ಲಿ ನಿಧನರಾದರು. ...
READ MORE