ಕತೆಗಾರ್ತಿ ಪ್ರೇಮಲತ. ಬಿ ಅವರ ಕತಾಸಂಕಲನ ತಿರುವುಗಳು. ಆಗೀಗ ಅಂಗಡಿಗೆ ಬಂದವಳ ಕೈತಾಕಿದರೆ, ಅವಳ ಮೈ ವಾಸನೆ ಬಂದರೆ ಅವನ ಕಾಲುಗಳು ನಡುಗುತ್ತಿದ್ದವು. ಅವಳು ರಾತ್ರಿ ತರಕಾರಿ ಬುಟ್ಟಿ ಇಟ್ಟು ಹೋದರೆ ನೆಮ್ಮದಿ ಎನಿಸುತ್ತಿತ್ತು. ಎಲ್ಲ ಜಾಡಿಸಿ ಮಂಕರಿಗಳನ್ನು ಹೊತ್ತು ಹೋದಳೆಂದರೆ ತನ್ನ ಜೊತೆ ಅವನ ಸುತ್ತಲ ಇಹವನ್ನೆಲ್ಲ ಚೀಲ ಮಾಡಿ ಹೊತ್ತೊಯ್ದಳೇನೋ ಎನ್ನುವಂತೆ ಅವನ ಒಂಟಿತನದಲ್ಲೂ ಏಕಾಂತ ಸೃಷ್ಟಿಯಾಗಿ ಬಿಡುತ್ತಿತ್ತು…
ತುಮಕೂರು ಮೂಲದ ಪ್ರೇಮಲತ ಬಿ. ಅವರು ದಂತವೈದ್ಯೆ. ಬೆಂಗಳೂರಿನಲ್ಲಿ ಪದವಿ, ಮ್ಯಾಂಚೆಸ್ಟರಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕಳೇದ ಹದಿನೈದು ವರ್ಷಗಳಿಂದ ಇಂಗ್ಲಂಡ್ ನಿವಾಸಿ. ಕನ್ನಡ ಓದು, ಬರವಣಿಗೆ ಹಾಗೂ ಸಮರ ಕಲೆಯ ಹವ್ಯಾಸವುಳ್ಳ ಇವರು ಕನ್ನಡ ಲೇಖನಗಳಿಗೆ ಬಹುಮಾನವನ್ನೂ ಪಡೆದವರು. ಕೃತಿ: ತಿರುವುಗಳು, ಐದು ಬೆರಳುಗಳು, ಕೋವಿಡ್ ಡೈರಿ ...
READ MORE