‘ಅತ್ತ ನಕ್ಷತ್ರ’ ಶ್ರೀರಾಜ್ ಎಸ್. ಆಚಾರ್ಯ ಅವರ ಕತಾಗುಚ್ಛವಾಗಿದೆ. ಇಲ್ಲಿ ಪ್ರೀತಿಯ ಅನಂತತೆಗೆ ಕಾದು ಸೋತವರಿದ್ದಾರೆ, ಹೃದಯ ಹಿಂಡಿದವರಿದ್ದಾರೆ, ಎದೆ ಕೊಯ್ದುಕೊಂಡವರಿದ್ದಾರೆ, ರಸ ಸುರಿದವರಿದ್ದಾರೆ, ಸುರಿಸಿಕೊಂಡವರೂ ಇದ್ದಾರೆ, ಪೊರೆ ಹರಿದುಕೊಂಡವರಿದ್ದಾರೆ. ಆಳ ಗರ್ಭವನ್ನೇ ಕಣ್ಣೋಳಗೆ ಇರಿಸಿಕೊಂಡವರಿದ್ದಾರೆ, ಅಂಗಾಂಗಗಳ ತೆವಲಿಗೆ ಬಲಿಯಾದವರಿದ್ದಾರೆ, ದೈಹಿಕ ಚೇಷ್ಟೆಗಳ ವಿರುದ್ಧ ಮೌನ ಸೃಷ್ಟಿಸಿದವರಿದ್ದಾರೆ. ಎಲ್ಲವೂ ಆಗಿ ಕಲ್ಲಾಗಿ ಉಳಿದವರಿದ್ದಾರೆ, ಹೆಚ್ಚಾಗಿ ಸ್ಫೋಟಗೊಂಡವರಿದ್ದಾರೆ. ಇಲ್ಲಿನ ಎಲ್ಲರಿಗೂ ವ್ಯಥೆಯಷ್ಟೇ ಆಗದೇ ಜೀವನದ ಕಥೆಯಾಗಿ ಪಾಠ ಹೇಳುತ್ತವೆ. ಇಲ್ಲಿನ ಪಾತ್ರಗಳು ಮೋಹದ ಬಳಕೆಗೆ ಸಿಲುಕಿದ ಅನಾಮಿಕ ಭಾವನೆಗಳು, ಭೋರ್ಗರೆಯುವ ಕಡಲಿನಂತೆ ಕಿನಾರೆಯನ್ನು ಮುಟ್ಟಿ ಮತ್ತೆ ಹಿಂದೆ ಮರಳುವಂತೆ ಮಾಡುವ ಪಾತ್ರಗಳು ನಿಮ್ಮದೇ, ನಿಮ್ಮವರದ್ದೇ ಅಥವಾ ನಿಮ್ಮ ಅಕ್ಕ ಪಕ್ಕದವರದ್ದೇ ಆಗಿ ಕಾಡದೇ ಇರದು. ಇದು ಒಂದು ಕಥೆಯೊಳಗಿನ ಕಾದಂಬರಿಯೋ, ಕಾದಂಬರಿಯೊಳಗಿನ ಕಥೆಯೋ, ಕಾವ್ಯದೊಳಗಿನ ನೀಳ್ಗತೆಯೋ, ಕಾದಂಬರಿಯಾಗುವರೆಗೆ ತಲುಪದೇ ಸೋತ ಅಸ್ಪಷ್ಟ ಕಥೆಯೋ, ಕಥೆಯಾಗುವುದಕ್ಕೆ ಒಪ್ಪದೇ ಏನೋ ಒಂದು ಆಗಿ ಕೊನೆಗೊಂಡ ಭಾವವೋ ಎಂಬೆಲ್ಲದರ ಬಗ್ಗೆ ಇಲ್ಲಿನ ಪಾತ್ರಗಳೇ ಮಾತಾಡುತ್ತವೆ.
ಶ್ರೀರಾಜ್ ಎಸ್. ಆಚಾರ್ಯ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿಯವರು. 1997 ಆಗಸ್ಟ್ 17 ರಂದು ಜನನ. `ಕಾವ್ಯ ಬೈರಾಗಿ' ಎನ್ನುವ ಕಾವ್ಯ ನಾಮದಿಂದ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ವಕ್ವಾಡಿಯಲ್ಲಿ, ಪದವಿ ಪೂರ್ವ ಶಿಕ್ಷಣ ಮತ್ತು ಪದವಿ ಶಿಕ್ಷಣವನ್ನು ಭಂಡಾರ್ ಕಾರ್‍ಸ್ ಕಾಲೇಜು ಕುಂದಾಪುರ ಹಾಗೂ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ನಿರ್ವಹಿಸಿರುವ ಅವರು ಉಡುಪಿಯ ಸ್ಥಳಿಯ ದೃಶ್ಯ ಮಾಧ್ಯಮ “ಪ್ರೈಮ್ ಟಿವಿ”ಯಲ್ಲಿ ಮೂರು ವರ್ಷಗಳ ...
READ MORE