ಲೇಖಕ ಮಾರುತಿ. ಎನ್. ಎನ್ ಅವರ ಕಥಾ ಸಂಕಲನ ಕರುವ್ಗಲ್ಲು . ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ಕೃತಿಯ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳಿದಂತ, ಮಾನವೀಯ ಮೌಲ್ಯಗಳ ಕುಸಿತ, ವಾಸ್ತವವನ್ನು ಒಪ್ಪಿಕೊಳ್ಳದೆ ತಿರಸ್ಕರಿಸಿ, ಜೀವನವನ್ನು ನರಕ ಮಾಡುವ ಸುತ್ತ ಮುತ್ತಲಿನ ಜನರ ವರ್ತನೆಯ ಸೂಕ್ಶ್ಮತೆಯನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದಾಗಿದೆ. ಯಾವಾಗಲೂ ಸುಂದರ ಜೀವನದ ಚಿತ್ರಣಗಳನ್ನೇ ಬಯಸುವ ನಾವು ಆಗಾಗ ಇಂಥ ಕಥೆಗಳನ್ನು ಓದಿದರೆ ವಾಸ್ತವದ ಅರಿವಾಗಬಹುದು. ಶೋಷಣೆ, ದೌರ್ಜನ್ಯದ ಕಥೆಗಳು ಇಂದಿಗೂ ಪ್ರಸ್ತುತವಾಗಿಯೇ ಉಳಿದಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ ಎಂದಿದ್ದಾರೆ.
ಲೇಖಕ ಡಾ. ಎನ್.ಎನ್. ಮಾರುತಿ ಅವರು ಮೂಲತಃ ತುಮಕೂರಿನವರು. ಅಲ್ಲಿಯ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿ, ದ್ರಾವಿಡಿಯನ್ ವಿ.ವಿ.ಯಿಂದ ಮನೋವಿಜ್ಞಾನ ವಿಷಯದಲ್ಲಿ ಹಾಗೂ ಅಳಗಪ್ಪ ವಿ.ವಿ.ಯಿಂದ ಪತ್ರಿಕೋದ್ಯಮ ಹಾಗೂ ಸಮೂಹ ಸಂವನ ವಿಷಯದಲ್ಲಿ ಸ್ನಾತಕೋತ್ತರ ಪದವಿ, ತುಮಕೂರಿನಲ್ಲಿ ಬಿ.ಇಡಿ, ಕುವೆಂಪು ವಿ.ವಿ.ಯಿಂದ ರಾಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ, ಶ್ರೀ ಸಿದ್ಧಾರ್ಥ ಕಾಲೇಜ್ ಆಫ್ ಎಜ್ಯಕೇಷನ್ ನಲ್ಲಿ ಸಹಾಯಕ ಪ್ರಾಧ್ಯಾಪಕರು. ‘ನಿಗೂಢ ನಿಶಾಚರಿಗಳು’ ಇವರ ಮೊದಲ ಕಥಾ ಸಂಕಲನ. ...
READ MORE