ಗಂಗಾ ಪಾದೇಕಲ್ ಅವರ 15 ಕಥೆಗಳ ಸಂಕಲನ. ಸದ್ರಿ ಕಥಾಸಂಕಲನವನ್ನು ಮಂಗಳೂರು ವಿಶ್ವವಿದ್ಯಾನಿಲಯವು ಈ ಹಿಂದೆ ಪದವಿಗೆ ಉಪಪಠ್ಯವಾಗಿ ಆರಿಸಿಕೊಂಡಿತ್ತು. ಇಲ್ಲಿರುವ ಕಥೆಗಳಲ್ಲಿ ಗಮನೀಯವಾಗಿ ಕಂಡುಬರುವುದು ಸ್ತ್ರೀಪರ ಧೋರಣೆಗಳು. ಆಗಿನ ಕಾಲಕ್ಕೆ ಇದು ಅತ್ಯಗತ್ಯವಾಗಿತ್ತು. ತನ್ನದಲ್ಲದ ಸಂಸಾರಕ್ಕಾಗಿ ರಾತ್ರಿಹಗಲೆನ್ನದೆ ದುಡಿಯುವ ಹೆಣ್ಣೊಬ್ಬಳ ಮಾನಸಿಕ ತೊಳಲಾಟ, ಅವಿವಾಹಿತ ಮಹಿಳೆಯರ ಬೇಗುದಿ, ಬಂಜೆಯರ ಹಾಗೂ ವಿಧವೆಯರ ಸಮಸ್ಯೆಗಳು, ದಾಂಪತ್ಯಜೀವನದ ಸಿಹಿ-ಕಹಿ, ವರಾನ್ವೇಷಣೆ, ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯದ ಹಿಂದಿರುವ ಹಲವು ಕೈಗಳು - ಹೀಗೆ ಹೆಣ್ಣೊಬ್ಬಳ ಮಾನಸಿಕ ವಿಪ್ಲವವನ್ನು ಕಥೆಗಳಲ್ಲಿ ತೆರೆದಿಟ್ಟ ಪರಿ ಚೆನ್ನಾಗಿದೆ. ಇಲ್ಲಿನ ಕಥೆಗಳಲ್ಲಿ ಕಾಣುವುದು ಹೆಣ್ಣೊಬ್ಬಳು ಆರ್ಥಿಕವಾಗಿ ಪರಾವಂಬಿಯಾದರೆ ಕಾಲಕಸಕ್ಕಿಂತ ಕಡೆಯಾಗಬಲ್ಲಳು ಎಂಬುವುದು. ಆರ್ಥಿಕ ಪರಾವಂಬಿಗಳ ಸಮಸ್ಯೆಯ ಹಲವು ಮುಖಗಳು ಇಲ್ಲಿನ ಕೆಲವು ಕಥೆಗಳಲ್ಲಿ ವ್ಯಕ್ತವಾಗಿದೆ.
ಕತೆಗಾರ್ತಿ ಗಂಗಾ ಪಾದೇಕಲ್ ಅವರು 1948 ಸೆಪ್ಟೆಂಬರ್ 01 ರಂದು ಪುತ್ತೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ಗಂಗಾರತ್ನ ಅವರು ಓದಿದ್ದು ಏಳನೇ ತರಗತಿ. ತಂದೆ ಮುಳಿಯ ಕೇಶವಭಟ್, ತಾಯಿ ಮುಳಿಯ ಸರಸ್ವತಮ್ಮ. ಮುಂದೆ ತಂದೆ, ತಾಯಿ, ಅಣ್ಣ ಹಾಗೂ 35ರ ಪ್ರಾಯದಲ್ಲಿಯೇ ಪತಿ ಗೋವಿಂದ ಭಟ್ಟರನ್ನು ಕಳಕೊಂಡು ಇಬ್ಬರು ಎಳೆಯ ಹೆಣ್ಣುಮಕ್ಕಳೊಂದಿಗೆ ಬದುಕು ಕಟ್ಟಿಕೊಂಡ ಈ ಧೀಮಂತಿನಿ ಗಂಗಾ ಪಾದೇಕಲ್ ಅವರಿಗೆ ಸಂಗಾತಿಯಾಗಿ ಇದ್ದದ್ದು ಸಾಹಿತ್ಯದ ಓದು ಮತ್ತು ಬರವಣಿಗೆ. ಪುತ್ತೂರಿನ ನರ್ಸಿಂಗ್ ಹೋಂನಲ್ಲಿ ಕಂಡ ದೃಶ್ಯವೇ ಇವರ 'ಜಾನಕಿಯ ಡೈರಿಯ ಕೆಲವು ಪುಟಗಳು' ಕಥಾವಸ್ತುವಾಗಿ ಮೂಡಿತು. ’ಪುಲಪೇಡಿ ಮತ್ತು ಇತರ ...
READ MORE