ಲೇಖಕ ಮಹೇಶ ಆರ್.ನಾಯಕ್ ಅವರ ಸಣ್ಣ ಕತೆಗಳ ಸಂಗ್ರಹ ‘18 ಮೊಳ’. ಡಾ.ಮೀನಾಕ್ಷಿ ರಾಮಚಂದ್ರ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದು, ‘ಈ ಕೃತಿಯು ಒಂಭತ್ತು ಸಣ್ಣ ಕಥೆಗಳ ಒಂದು ಸುಂದರ ಗುಚ್ಛ. ವಿಂಶತಿ ವರುಷ 2020ರ ಸಂಭ್ರಮದಲ್ಲಿರುವ ಇವರ ಕಲ್ಲಚ್ಚು ಪ್ರಕಾಶನವು ಸಾಹಿತ್ಯ, ಸಂಸ್ಕೃತಿ, ಕಲೆ, ಸಂಘಟನೆ ಸದ್ವಿಚಾರದ ಜೊತೆಗೆ ಮಹತ್ತರ ಸಾಧನೆಯ ಹಾದಿಯಲ್ಲಿ ನಿರಂತರವಾಗಿ ಸಾಗುತ್ತಿದೆ ಎಂಬುದಾಗಿ ಹೇಳಿದ್ದಾರೆ.
ಕೃತಿಯ ಪರಿವಿಡಿಯಲ್ಲಿ 18 ಮೊಳ, ಒಂದು ಸೆಲ್ಫಿಯ ಕಥೆ, ಮಂಕಿ ಕ್ಯಾಪ್!, ರಿವರ್ಸ್ ಗೇರ್, ಉದರ..ಘೊ(ಪೋ)ಷಣೆ, ಮಾನವ ಮೂಳೆ ಮಾಂಸದ.., ಇದೂ ಒಂದು ಪ್ರೇಮ ಕಥೆ..ನೇ?, ಬೆಂಝಲು ರಂದ್ರ ಮತ್ತು ಮುದ್ದು ಕೃಷ್ಣ, ಎಕ್ಸ್ ಕ್ಲೂಸಿವ್ ಡಾಲರ್ ಸೆರಿ ಒಂಭತ್ತು ಕತೆಗಳು ಈ ಕೃತಿಯಲ್ಲಿವೆ.
ಮಹೇಶ್ ಆರ್. ನಾಯಕ್ ಅವರು ಕಲ್ಲಚ್ಚು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದಾರೆ. ಕಡಲತಡಿಯ ಸಾಹಿತ್ಯ ಲೋಕದ ಸರಿಸುಮಾರು ಮೂರು ದಶಕಗಳಿಂದ ಕೇಳಿ ಬರುವ ಇವರ ಹೆಸರು, ವಿಶೇಷವಾಗಿ ಸಣ್ಣಕಥಾ ರಚನೆ ಹಾಗೂ ಇತರ ಹೆಚ್ಚಿನ ಪ್ರಕಾರಗಳಲ್ಲೂ ಬರೆದು ಸೈ ಎನ್ನಿಸಿಕೊಂಡಿದ್ದಾರೆ. 21 ವರ್ಷಗಳಿಂದ ಸಾಹಿತ್ಯ ಸಂಸ್ಕೃತಿ ಕಲೆ ಸಂಘಟನೆ ಸದ್ವಿಚಾರಗಳ ಮೂಲಕ ಸಕ್ರಿಯವಾಗಿರುವ "ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥರು. ಈವರೆಗೆ ಸ್ವರಚಿತ 18 ಮತ್ತು ಕಲ್ಲಚ್ಚು ಪ್ರಕಾಶನದ ನೆಲೆಯಲ್ಲಿ 48 ಸಾಹಿತ್ಯ ಕೃತಿಗಳು ಪ್ರಕಟವಾಗಿವೆ. ನೂರಾರು ಸಾಹಿತ್ಯಪರ ಗೋಷ್ಠಿಗಳಲ್ಲಿ ವಿವಿಧ ನೆಲೆಗಳಿಂದ ತಾಲೂಕು ಜಿಲ್ಲೆ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ...
READ MORE