ಲೇಖಕಿ ಮಿತ್ರಾ ವೆಂಕಟ್ರಾಜ್ ಅವರ ಕಥಾ ಸಂಕಲನ-ಹಕ್ಕಿ ಮತ್ತು ಅವಳು. ಸಣ್ಣ ಘಟನೆಗಳ ಸೈಷ್ಟಿಸುವ ಮೂಲಕ ಹಿರಿದಾದ ಅರ್ಥವನ್ನು ಸೂಚಿಸುವುದು ಇಲ್ಲಿಯ ಕಥೆಗಳ ವೈಶಿಷ್ಟ್ಯ. ‘ಒಂದು ಒಸಗೆ ಒಯ್ಯುವುದಿತ್ತು’, ‘ಇಲ್ಲೊಬ್ಬಳು ಸೀತೆ’ ಮುಂತಾದ ಕಥೆಗಳು ತಮ್ಮ ಕಥಾವಸ್ತುವಿನಿಂದ, ಪಾತ್ರಗಳ ಸೃಷ್ಟಿಯಿಂದ, ಸನ್ನಿವೇಶಗಳ ಕಲಾತ್ಮಕತೆಯಿಂದ ಗಮನ ಸೆಳೆಯುತ್ತವೆ. ಲೇಖಕಿಯ ಅನುಭವಗಳು ಕಲಾತ್ಮಕವಾಗಿ ಹೆಣೆಯಲ್ಪಟ್ಟಿವೆ. ಉಗ್ರವಾದಿ ಸ್ತ್ರೀವಾದ, ಅದರ ಒರಟಾದ ಮೊಂಡುವಾದಗಳು ಕಥೆಗಳಲ್ಲಿ ಇಲ್ಲ. ಬದುಕನ್ನು ಹಸನಾಗಿಸುವ ಪ್ರಾಮಾಣಿಕ ತುಡಿತ ಇಲ್ಲಿಯ ಕಥೆಗಳಲ್ಲಿದೆ.
ಕಥೆಗಾರ್ತಿ ಮಿತ್ರಾವೆಂಕಟ್ರಾಜ್ ಅವರು 1948 ಜುಲೈ 11 ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ‘ರುಕುಮಾಯಿ, ಹಕ್ಕಿ ಮತ್ತು ಅವಳು’ ಅವರ ಕಥಾಸಂಕಲನ, ಮೌಖಿಕ ಲೇಖನಗಳ ಸಂಕಲನ ಬೊಗಸೆಯಲ್ಲಿಟ್ಟು ಬೆಳಕು ತುಂಬಿ, ಮುಗಿಲು ಮಲ್ಲಿಗೆಯ ಎಟಕಿಸಿ ಮುಂತಾದ ಕೃತಿಗಳನ್ನು ರಚಿಸಿದ್ಧಾರೆ. ಕತೆಹೇಳೆ - ಮುಂಬೈ ಲೇಖಕಿಯರ ಕಥಾಸಂಕಲನ), ಬೆಳಕಿನೆಡೆಗೆ - ಮುಂಬೈ ಲೇಖಕಿಯರ ಲೇಖನಗಳ ಸಂಗ್ರಹ ಅವರ ಸಂಪಾದಿತ ಕೃತಿಗಳು. ಒಂದು ಬಸ್ಸಿಗೆ ಒಯ್ಯುವುದಿತ್ತು ಕಥೆಗೆ ದಿಲ್ಲಿಯ ಕಥಾಪ್ರಶಸ್ತಿ, ಹಕ್ಕಿ ಮತ್ತು ಅವಳು ಸಂಕಲನಕ್ಕೆ ರತ್ನಮ್ಮ ಹೆಗಡೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಾಷ್ಟ್ರೀಯ ಮಹಿಳಾವರ್ಷದ ಪ್ರಶಸ್ತಿ, ...
READ MORE