‘ಪ್ರೀತಿ ಪ್ರಣಯ ಪುಕಾರು’ ಕೃತಿಯು ವೈಶಾಲಿ ಹೆಗಡೆ ಅವರ ಸಣ್ಣಕತೆಗಳ ಸಂಕಲನ. ಮುಗ್ಧತೆ ಕೂಡ ಎಷ್ಟು ಸಂಕೀರ್ಣವಾಗಿರಬಹುದು ಎಂಬುದನ್ನು ‘ಪ್ರೀತಿ, ಪ್ರಣಯ ಪುಕಾರು’ ಎಂಬ ಕತೆ ಸಮರ್ಥವಾಗಿ ಕಟ್ಟಿಕೊಡುತ್ತದೆ. ಆತ್ಮಸಂಗಾತಕ್ಕೆ ಕಾರಣ ಕೇಳಬೇಕಿಲ್ಲ. ಸಾಂಗತ್ಯ, ಪ್ರೀತಿ, ಆಕಾರಣವಾದದ್ದು ದಾಂಪತ್ಯದಲ್ಲಿ ದ್ವೇಷಿಸಲು ನಮ್ಮ ಸಮಾಜ ನಮಗೆ ಪಾರದರ್ಶಕ ಕಾರಣಗಳನ್ನು ಕಟ್ಟಿಕೊಡುತ್ತದೆ. ಆದರೆ ಪ್ರೀತಿಸುವುದನ್ನು ತಾವೇ ಕಲಿತುಕೊಳ್ಳಬೇಕು. ಮೈ ಮತ್ತು ಮನಸ್ಸಿನ ಅವಶ್ಯಕತೆಗಳನ್ನು ಬೇರೆ ಬೇರೆ ಎಂದು ಭಾವಿಸುವ ಮತ್ತು ಈ ರೀತಿ ಬಾಳುವುದರಿಂದ ಪರಸ್ಪರರಿಗೆ ಆಗುವ ಸುಖ-ದುಃಖಗಳ ಪರಿಕಲ್ಪನೆಯನ್ನು ಅವರದೇ ರೀತಿಯಲ್ಲಿ ಪರಿಭಾವಿಸಿಕೊಂಡು, ಆದಕ್ಕೆ ತಕ್ಕನಾಗಿ ಬಾಳುವ ಮುಗ್ಧ ದಂಪತಿಯ ಕತೆ ಇದು. ಪಾತ್ರಗಳ ಮುಗ್ಧತೆ ಈ ಕತೆಯಲ್ಲಿ ಪರಿಣಾಮಕಾರಿಯಾಗಿ ಮೂಡಿದೆ. ಕೆಂಡಸಂಪಿಗೆ”, ’ಕನಸುಗಳು ಮಾರಾಟಕ್ಕಿವೆ’’ ಈ ಕೃತಿಯಲ್ಲಿನ ಮುಖ್ಯ ಕತೆಗಳಾಗಿವೆ.
ಲೇಖಕಿ ವೈಶಾಲಿ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದವರು. ಪ್ರಸ್ತುತ ಅಮೇರಿಕಾದಲ್ಲಿ ವಾಸ. ಬಾಸ್ಟನ್ ನ ಉತ್ತರದ ಊರೊಂದರ ಟೆಲಿಕಾಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು 'ಒದ್ದೆ ಹಿಮ.. ಉಪ್ಪುಗಾಳಿ' ಪ್ರಬಂಧ ಸಂಕಲನ ಪ್ರಕಟಿಸಿದ್ದಾರೆ. ...
READ MORE