‘ನರವಿಂಧ್ಯ’ ಕಂನಾಡಿಗಾ ನಾರಾಯಣ ಅವರ ಕಥಾಸಂಕಲನವಾಗಿದೆ. ಒಂದು ಗ್ರಾಮೀಣ ಬದುಕಿನ ಹಿನ್ನೆಲೆಯಿರುವ, ಬದುಕಬೇಕಾದ ರೀತಿಯಲ್ಲಿ ಬದುಕಲಾರದ ಮನುಷ್ಯನ ಅಸಹಾಯಕತೆಯ ಸುತ್ತ ಹೆಣೆದಿರುವ ಕತೆಗಳಾಗಿವೆ.
ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...
READ MOREಹೊಸತು-2003- ಎಪ್ರಿಲ್
ಒಂದು ಗ್ರಾಮೀಣ ಬದುಕಿನ ಹಿನ್ನೆಲೆಯಿರುವ, ಬದುಕಬೇಕಾದ ರೀತಿಯಲ್ಲಿ ಬದುಕಲಾರದ ಮನುಷ್ಯನ ಅಸಹಾಯಕತೆಯ ಸುತ್ತ ಹೆಣೆದಿರುವ ಕತೆಗಳು. ನಾಗರಿಕ ಜೀವನದ ಎಲ್ಲ ಅವಲಕ್ಷಣಗಳನ್ನು ಖಂಡಿಸುತ್ತಿದ್ದಂತೆ ಪರಿಸರದ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತ ಹಿಡಿಮಣ್ಣಿಗೂ ಭೂಗೋಲದ ಬೆಲೆಯನ್ನೇ ಕಟ್ಟಲಾಗಿದೆ. ಇಲ್ಲಿನ ಬರವಣಿಗೆಯಲ್ಲಿ ಎಲ್ಲೋ ಅವಿತಿರುವ ಮನುಷ್ಯನ ಒಳ್ಳೆಯ ತನವನ್ನು ಬಗೆದು ನೋಡುವ ಪ್ರಯತ್ನವಿದೆ. ಆಡುಮಾತಿನ ಶೈಲಿ ಬಲು ಸೊಗಸಾಗಿದೆ.