ಭಾರತ ವೀರ ಚರಿತ ಎಸ್.ಜಿ.ನರಸಿಂಹಾಚಾರ್ ಅವರ ಕೃತಿಯಾಗಿದೆ. ವೀರ ವ್ಯಕ್ತಿತ್ವಗಳ ಕುರಿತ ಕತೆಗಳನ್ನು ಇಲ್ಲಿ ಹೇಲಾಗಿದೆ. ಈ ಪುಸ್ತಕದಲ್ಲಿ ಬೆಂಕಿಗೆ ಸಿಕ್ಕಿ ಬದುಕಿದವಳು, ಪಾದಪಾಹನ ಪತ್ನಿ, ಬಳೆಯ ಬಂಧುತ್ವ. ವೀರನಾರಿ ಹೀಗೆ ಅನೇಕ ಕುತೂಹಲಕಾರಿ ಕಥೆಗಳು ಇವೆ.
ಶ್ರೀರಂಗಪಟ್ಟಣದಲ್ಲಿ ಎಸ್.ಜಿ. ನರಸಿಂಹಾಚಾರ್ಯರು 11-09-1862 ರಂದು ಜನಿಸಿದರು. ತಂದೆ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು. ತಾಯಿ ಸೀತಮ್ಮ.ಶ್ರೀರಂಗಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಮೈಸೂರಿನಲ್ಲಿ ಬಿ.ಎ. ಪದವಿ ಹಾಗೂ 1892ರಲ್ಲಿ ಎಂ.ಎ. ಪದವೀಧರರು. ವಿದ್ಯಾ ಇಲಾಖೆಯಲ್ಲಿ ಸೇರಿ ಶ್ರೀರಂಗಪಟ್ಠಣದ ಶಾಲೆಯಲ್ಲೇ ಶಿಕ್ಷಕರು. ನಂತರ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ ಸೇರಿದರು. ರಾಮಾನುಜ ಅಯ್ಯಂಗಾರ‍್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಆರಂಭಿಸಿದರು. ನಂತರ, 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ’ ಪತ್ರಿಕೆ ಪ್ರಾರಂಭಿಸಿದರು. ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಕರ್ನಾಟಕ ಕಾವ್ಯಮಂಜರಿಯಲ್ಲಿ ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ...
READ MORE