‘ಪ್ಯಾಲೆಸ್ಟೀನ್‌ನ ಮಕ್ಕಳು‘ ಲೇಖಕ ಘಸನ್ ಕನಫನಿಯವರ ಕೃತಿಯಾಗಿದ್ದು ಇದನ್ನು ಕನ್ನಡಕ್ಕೆ ರವಿ ಹಂಪಿ ಅವರು ಅನುವಾದಿಸಿದ್ದಾರೆ., ಲೇಖಕ ಘಸನ್ ಕನಫನಿಯವರ ಉತ್ತರ ಪ್ಯಾಲೆಸ್ಟೀನ್‌ನವರಾಗಿದ್ದು, 'ಪಾಪುಲರ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೀನ್'ನ ಮುಖವಾಣಿಯಂತಿದ್ದರು. ಅನೇಕ ನಿಯತಕಾಲಿಕಗಳಲ್ಲಿ ಕೆಲಸ ಮಾಡುತ್ತ, ಸಿಕ್ಕ ಚಿಕ್ಕ ಸಣ್ಣಪುಟ್ಟ ಅವಕಾಶಗಳನ್ನು ಪ್ಯಾಲೆಸ್ಟೀನ್ ರಕ್ಷಣೆಗೆ, ಪ್ಯಾಲೆಸ್ಟೀನ್ ಜನರ ರಕ್ಷಣೆಗಾಗಿ, ಮತ್ತು ಹೊರಜಗತ್ತಿಗೆ ಪ್ಯಾಲೆಸ್ಟೀನ್ ಜನರ ತೊಂದರೆ, ನೋವುಗಳನ್ನು ತೆರೆದಿಡುವ ಕೆಲಸ ಮಾಡಿದರು. ಇವರು 1972ರಲ್ಲಿ ಬೈರೂತ್‌ನಲ್ಲಿ ಕಾರ್‌ಬಾಂಬ್ ಸ್ಪೋಟದಲ್ಲಿ ಕೊಲ್ಲಲ್ಪಟ್ಟರು. ಘಸನ್ ಅವರ ಕಥೆಗಳು ಇವತ್ತಿಗೂ ನಿಗಿನಿಗಿಸುತ್ತವೆ. ಯುದ್ಧದ ಅನುಭವ ನೀಡುತ್ತವೆ. ನಮ್ಮೊಳಗಿನ ಮನುಷ್ಯತ್ವವನ್ನು ಬಡಿದೆಬ್ಬಿಸುತ್ತವೆ. ಇಂಥಾ ಜೀವಂತ ಜ್ವಾಲಾಮುಖಿಗಳಂಥ ಕಥೆಗಳನ್ನು ಈ ಪುಸ್ತಕದಲ್ಲಿ ಓದಬಹುದು.
ರವಿ ಹಂಪಿ ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಿ ಗ್ರಾಮದವರು. ಪ್ರಸ್ತುತ ಲಿಂಗಸ್ಗೂರು ತಾಲೂಕಿನ ಕಸಬಾಲಿಂಗಸ್ಗೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಸಹಾಯ ಪಡೆದ ‘ಸಖ-ಸಖಿ’ ಗಜಲ್ ಸಂಕಲನ ಸೃಷ್ಠಿ ಪ್ರಕಾಶನದಿಂದ ಪ್ರಕಟಗೊಂಡಿದೆ. ಇವರ ಕಥೆ ಗಜಲ್‌ಗಳು ತುಷಾರ, ಮಲ್ಲಿಗೆ, ಮಯೂರ, ಸಂಯುಕ್ತ ಕರ್ನಾಟಕ ಹೊಸತು ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅನುವಾದದಲ್ಲಿ ಆಸಕ್ತಿ ಹೊಂದಿರುವ ಇವರು ಇತ್ತೀಚಿಗೆ ಇಂಗ್ಲೀಷಿನಿಂದ ಕಾದಂಬರಿಗಳ ಅನುವಾದದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಚಯ ಕಾವ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ ...
READ MORE