ಮಧುಸೂದನ ವೈ ಎನ್. ಬರೆದಿರುವ ಸಣ್ಣ ಕಥೆಗಳ ಸಂಕಲನ-ಕಾರೇಹಣ್ಣು. ಮೊದಲ ಸಂಕಲನವೇ 2019ರ ಸಾಲಿನ ಈ ಹೊತ್ತಿಗೆ ಕಥಾ ಪ್ರಶಸ್ತಿ ಪಡೆದು ಗಮನ ಸೆಳೆದಿದೆ.
ಇಲ್ಲಿಯ ಒಂಟಿತನ ಕಥೆಯು ಬದುಕಿನ ಧೀಮಂತಿಕೆಯನ್ನೂ ಹೇಳುತ್ತವೆ.ಪ್ಯಾರಿಸ್ ನಗರದ ತಳಮಳಗಳನ್ನೆಲ್ಲಾ ಮೊನಾಲಿಸಾಳ ನಗೆಯಲ್ಲಿ ಕಾಣುವ, ಎರಡು ಹೃದಯಗಳಿಗೆ ಹಚ್ಚಲೆಂದೇ ವಿಶಿಷ್ಟ ಮುಲಾಮೊಂದನ್ನು ತರುವ, ’ಬೋಣಿ’ ಕತೆಯಲ್ಲಿ ನೋವಿನ ಜೀವಗಳನ್ನು ತೆರೆದಿಡುವ, ಸಣ್ಣ ಸಣ್ಣ ವಿವರಗಳನ್ನೂ ಚಿತ್ರವತ್ತಾಗಿ ಕಟ್ಟಿಕೊಡುವ ಕಥನ ಶೈಲಿ ಗಮನ ಸೆಳೆಯುತ್ತದೆ.
1987ರಲ್ಲಿ, ಜನಿಸಿದ ಮಧುಸೂಧನ್ ವೈ ಎನ್ ಮೂಲತಃ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಯರಗುಂಟೆ ಗ್ರಾಮದವರು.ತುಮಕೂರಿನ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ, ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ, ಬಿಟ್ಸ್ ಪಿಲಾನಿಯಿಂದ ಸಾಫ್ಟ್‌ವೇರ್ ಸಿಸ್ಟಮ್‌ನಲ್ಲಿ ಮಾಸ್ಟರ್ಸ್ ಡಿಗ್ರಿ, 2008ರಲ್ಲಿ ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗ ಆರಂಭ. ಸಧ್ಯಕ್ಕೆ ಐಬಿಎಮ್ ಉದ್ಯೋಗಿ, ಬೆಂಗಳೂರಿನಲ್ಲಿ ವಾಸ, ಸಾಹಿತ್ಯದ ಓದು, ವಿಶ್ವ ಸಿನಿಮಾಗಳ ಟೀಕೆಗೆ ಇವರ ಹವ್ಯಾಸ. ಇವರ ಚೊಚ್ಚಲ ಕೃತಿ ಕಾರೇಹಣ್ಣು" ಕಥಾ ಸಂಕಲನವು 2019ರ 'ಈ ಹೊತ್ತಿಗೆ' ಕಥಾ ಸಂಕಲನ ಪ್ರಶಸ್ತಿಗೆ ಭಾಜನವಾಗಿದೆ. 'ಬಹುರೂಪಿ'ಯಿಂದ ಪ್ರಕಟವಾಗುತ್ತಿರುವ `ಫೀಫೋ' ಮಧು ...
READ MORE