`ಎಂ ಟಿ ವಾಸುದೇವನ್ ನಾಯರ್ ಕತೆಗಳು' ಕೃತಿಯು ಮೋಹನ ಕುಂಟಾರ್ ಅವರ ಕಥಾಸಂಕಲನವಾಗಿದೆ. ಕೃತಿಯ ಕುರಿತಂತೆ ರಾಘವೇಂದ್ರ ಪಾಟೀಲು ಅವರು ಹೀಗೆ ಹೇಳಿದ್ದಾರೆ; ಎಂ.ಟಿ. ಯವರ ಇಲ್ಲಿನ ಯಾವುದೇ ಕಥೆಯೂ ಯಾವುದ ಸೈದ್ಧಾಂತಿಕತೆಯನ್ನು ಮುಂಚಾಚುವ ಒಂದಿನಿತಾದರೂ ಪ್ರಯತ್ನದಲ್ಲಿ ತೊಡಗುವುದಿಲ್ಲ. ತೀವ್ರವಾದ ಕಮ್ಯುನಿಸ್ಟ್ ಆವರಣದಲ್ಲಿದ್ದು, ತೊಡಗುವ ಎಂ.ಟಿ.ಯವರು ಇಲ್ಲಿನ ಯಾವುದೇ ಕಥೆಯಲ್ಲಿ ಪೊಲಿಟಿಕಲಿ ಕರೆಕ್ಟ್ ಎಂದೆನ್ನಿಸಿಕೊಳ್ಳುವ ರೀತಿಯ ಬರೆಹಕ್ಕೆ ತೊಡಗುವುದೇ ಇಲ್ಲ. ಬದುಕಿನ ವಾಸ್ತವ ಮತ್ತು ಆದರೆ ಅನೂಹ್ಯ ಸಂಭವಿಸುವಿಕೆಗಳು ಮಾತ್ರ ಅವರ ಕಥನದ ಗಮನ ಕೇಂದ್ರಗಳಾಗುತ್ತವೆ. ಅಂತಲೇ ಕುಟುಂಬವು ಎಂ.ಟಿ.ಯವರ ಬಹುತೇಕ ಕಥೆಗಳ ಆವರಣವಾಗುತ್ತದೆ. ಕುಟುಂಬದ ಆವರಣದಲ್ಲಿ ಏರ್ಪಡುವ ಸಂಬಂಧಗಳು ಮತ್ತು ಅವುಗಳ ವಿಘಟನೆ ಇವರ ಕಥೆಗಳಲ್ಲಿ ಮತ್ತೆ ಮತ್ತೆ ಶೋಧಕ್ಕೆ ಒಳಗಾಗುವ ಸಂಗತಿಗಳು, ಮಾತೃಮೂಲೀಯ ಸಂತಾನದ ಕೌಟುಂಬಿಕ ವ್ಯವಸ್ಥೆಯು (ಮ್ಯಾಟ್ರಿಯಾಸ್ಕಲ್ ಫ್ಯಾಮಿಲಿ ಸಿಸ್ಟೆಮ್ ) ತನ್ನ ಕಟ್ಟುಪಾಡುಗಳನ್ನು ಕಳೆದುಕೊಂಡು, ತರವಾಡುಗಳೆನ್ನುವ ಕೂಡು ಕುಟುಂಬಗಳು ವಿಘಟನೆಗೊಂಡು ನ್ಯೂಕ್ಲಿಯ ಫ್ಯಾಮಿಲಿ ಮೂಡಿ ಬರುತ್ತಿರುವಂತಹ ಬದಲಾವಣೆಗಳು ವಾಸುದೇವನ್ ನಾಯರ್ ಅವರ ಅನೇಕ ಕಥೆಗಳ ಹಿನ್ನೆಲೆಯಲ್ಲಿವೆ.
ಡಾ. ಎ. ಮೋಹನ್ ಕುಂಟಾರ್ ಅವರು 25-05-1963ರಂದು ಜನಿಸಿದರು. ಬಿ.ಎ, ಎಂ.ಎ, ಎಂ.,ಫಿಲ್ ಪದವೀಧರರು. ಮಲೆಯಾಳಂ ಭಾಷೆಯಲ್ಲಿ ಸರ್ಟಿಫಿಕೆಟ್, ತಮಿಳು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ತೆಲುಗು ಭಾಷೆಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಭಾಷಾಂತರ, ಸಾಹಿತ್ಯ, ಸಂಸ್ಕೃತಿ, ಮತ್ತು ಯಕ್ಷಗಾನ ಪ್ರಮುಖ ಆಸಕ್ತಿ ಕ್ಷೇತ್ರಗಳು. ಕೇರಳ ಕಥನ, ಸಮುದಾಯಗಳ ಕನ್ನಡ ಪರಂಪರೆ, ಕನ್ನಡ ಮಲೆಯಾಳಂ ಭಾಷಾಂತರ ಪ್ರಕ್ರಿಯೆ ಇವರ ಪ್ರಮುಖ ಪ್ರಕಟಣೆಗಳು. ಕನ್ನಡ ಅನುವಾದ ಸಾಹಿತ್ಯ,”ಸಮುದಾಯಗಳಲ್ಲಿ ಲಿಂಗಸಂಬಂಧಿ ನೆಲೆಗಳು’ ಪ್ರಮುಖ ಸಂಶೋಧನಾ ಲೇಖನಗಳಾಗಿವೆ. ...
READ MORE