ತೊಳೆದ ಮುತ್ತು ಪುಸ್ತಕವು ಕೆರೂರು ವಾಸುದೇವಾಚಾರ್ಯರ ಕೃತಿಯಾಗಿದೆ. ಈ ಕೃತಿಯಲ್ಲಿ ಕಾಲ್ಪನಿಕ ಮತ್ತು ಐತಿಹಾಸಿಕ ಕಥೆಗಳದೊಂದು, ಚಾರಿತ್ರಿಕ ಕಥೆ, ಸಾಮಾಜಿಕ ಮತ್ತು ಪತ್ತೆಪಾರಿ ಕಥೆಗಳದೊಂದು ಹೀಗೆ ಬೇರೆ ಬೇರೆ ಸಂಕಲನಗಳನ್ನು ಮಾಡಿ, ಪ್ರತಿಯೊಂದು ಸಂಕಲನಕ್ಕೂ ಬೇರೆ ಬೇರೆ ಹೆಸರಿಟ್ಟು ಪ್ರಕಟಿಸಲಾಗಿದೆ.
ಹೊಸಗನ್ನಡ ಪ್ರಾರಂಭದ ಗಮನಾರ್ಹ ಕಾದಂಬರಿಗಳಲ್ಲೊಂದಾದ ‘ಇಂದಿರೆ’ಯ ಕರ್ತೃ ಕೆರೂರು ವಾಸುದೇವಾಚಾರ್ಯರು 1866 ಅಕ್ಟೋಬರ್ 15 ಬಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ ಜನಿಸಿದರು. ನಳದಮಯಂತಿ ನಾಟಕವನ್ನು ರಚಿಸಿ ರಂಗದ ಮೇಲೂ ಪ್ರಯೋಗ ಮಾಡಿದ ಮೊದಲಿಗರು.ವಿಚಾರ ಪೂರ್ಣ ಸಂವೇದನಾಶೀಲತೆಯನ್ನು ಕಾದಂಬರಿಯಲ್ಲಿ ತರುವುದೇ ಇವರ ಪ್ರಮುಖ ಉದ್ದೇಶ. ಹಾಸ್ಯವನ್ನು ಬೆರೆಸಿ ಕಥೆಯ ಆಕರ್ಷಣೆಯನ್ನು ಹೆಚ್ಚಿಸುವುದು ಕೆರೂರರ ಅಭಿವ್ಯಕ್ತಿಯ ವೈಶಿಷ್ಟ . ಆನಂತರ “ಯದು ಮಹಾರಾಜ, ಭಾತೃಘಾತಕ ಔರಂಗಜೇಬ, ವಾಲ್ಮೀಕಿ ವಿಜಯ, ಯವನ ಸೈರಂ” ಎಂಬ ಐದು ಕಾದಂಬರಿಗಳನ್ನು ರಚಿಸಿದರು. “ಪ್ರೇಮ ವಿಜಯ, ತೊಳೆದ ಮುತ್ತು, ಬೆಳಗಿದ ದೀಪಗಳು” ಕಥಾ ಸಂಗ್ರಹಗಳು. ವಸಂತ ಯಾಮಿನಿ (ಷೇಕ್ಸ್‌ಪಿಯರನ ಮಿಡ್ ...
READ MORE