ಕತೆಗಾರ ಪಿ. ಬಿ ಪ್ರಸನ್ನ ಅವರು ಬರೆದಿರುವ ಕಥಾ ಸಂಕಲನ ’ತನುವಿನೊಳಗೆ ಹುಸಿತುಂಬಿ’ ಕೃತಿಯಲ್ಲಿನ ಕತೆಗಳು ಅತ್ಯಂತ ಸರಳ ಕತೆಗಳಾಗಿವೆ. ಹೆಚ್ಚಾಗಿ ಏನನ್ನೂ ಬಯಸದೇ ಎಲ್ಲವನ್ನೂ ತಿಳಿಸುವ ಕಥಾ ಹಂದರವನ್ನು ಇವರ ಕತೆಗಳು ಹೆಣೆಯುತ್ತವೆ.
ಬದಲಾಗುತ್ತಿರುವ ಸಾಮಾಜಿಕ ಜೀವನದಲ್ಲಿ ಸಂಕೀರ್ಣವಾಗುತ್ತಿರುವ ಮಾನವ ಸಂಬಂಧಗಳ ಬಗ್ಗೆ ಇಲ್ಲಿನ ಕತೆಗಳು ಕುತೂಹಲವನ್ನು ಹೆಚ್ಚಿಸುತ್ತದೆ. ಕತೆಗಳಲ್ಲಿನ ಸಂಬಂಧಗಳು ಕೋಮುವಾದೀ ಸ್ವರೂಪವನ್ನು ತಾಳುತ್ತಿರುವುದನ್ನು ಕತೆಗಾರ ಗ್ರಹಿಸಿ ಪಾತ್ರ ಕಟ್ಟುವಲ್ಲಿ ಕತೆಯನ್ನು ಸೃಷ್ಟಿಸಿದ್ದಾರೆ.
ಗಂಡು-ಹೆಣ್ಣಿನ ಸಂಬಂಧಗಳು ಹೊಸ ಬಗೆಯ ಅರ್ಥ ವಿಸ್ತಾರವನ್ನು ಪಡೆದುಕೊಳ್ಳುತ್ತಿರುವುದನ್ನು ಲೇಖಕರು ಕಡೆಗಣಿಸುವುದಿಲ್ಲ. ಸ್ಥಳೀಯ ಘಟನೆಗಳನ್ನು ಅದಕ್ಕನುಗುಣವಾದ ಸ್ಥಳೀಯ ಭಾಷೆಯಲ್ಲಿ ಹಾಸ್ಯ ಮತ್ತು ವ್ಯಂಗ್ಯ ಬೆರೆಸಿ ಕತೆಯಾಗಿಸುವ ಪಿ.ಬಿ ಪ್ರಸನ್ನ ಅವರ ಶೈಲಿ ವಿಭಿನ್ನವಾಗಿದೆ.
ಮೂಲತಃ ಉಡುಪಿಯವರಾದ ಪಿ.ಬಿ. ಪ್ರಸನ್ನ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎರಡು ದಶಕಗಳಿಂದ ಕನ್ನಡ ಉಪನ್ಯಾಸಕರಾಗಿದ್ದಾರೆ. ಹೆಗ್ಗಡದೇವನ ಕೋಟೆ, ಶಿರಸಿ, ದಕ್ಷಿಣಕನ್ನಡ ಜಿಲ್ಲೆಯ ಹಳೆಯಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಮೂಡಬಿದರೆಯ ನಿವಾಸಿ. 'ಡೀಸೆಂಟಾಗಿ ಬಯ್ಯುವುದು', 'ಸುಳ್ಳಿಗೆ ಜಯವೆನ್ನಿ' ಇವರ ಹಾಸ್ಯ ಲೇಖನಗಳ ಸಂಕಲನಗಳು. 'ಗಣಪ ಮತ್ತು ಗಾಂಪ', 'ಮಣ್ಣಿಂದ ಕಾಯ', “ತನುವಿನೊಳಗೆ ಹುಸಿತುಂಬಿ' ಕಥಾಸಂಕಲನಗಳು. 'ಮಂಚ ಮತ್ತು ಒಡಲು' ಕವನ ಸಂಗ್ರಹ. ...
READ MORE