ಹನ್ನೊಂದು ಹಳಿಗಳು

Author : ಶಾಂತಲ

Pages 156

₹ 180.00




Year of Publication: 2024
Published by: ಹರಿವು ಬುಕ್ಸ್
Address: #67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿ.ವಿ.ಜಿ ರಸ್ತೆ, ನಾಗಸಂದ್ರ ಸರ್ಕಲ್ ಹತ್ತಿರ, ಬಸವನಗುಡಿ, ಬೆಂಗಳೂರು - 560004
Phone: 8088822171

Synopsys

‘ಹನ್ನೊಂದು ಹಳಿಗಳು’ ಡಾ. ಶಾಂತಲಾ ಅವರ ಕತಾಸಂಕಲನವಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; “ನೀವು ಹೇಗೆ ಬರೆಯುವುದು?” ಎಂಬುದು ಅನೇಕರ ಸಹಜವಾದ ಪ್ರಶ್ನೆ. ವಾಸ್ತವವಾಗಿ, ನಾನು ‘ಹಾಗೆ’ ಅಂದರೆ ಹಾಳೆಯ ಮೇಲೆ ಲೇಖನಿ ಹಿಡಿದು ಬರೆಯುವುದೇ ಇಲ್ಲ. ಬರಹಗಳನ್ನು ಕಂಪ್ಯೂಟರ್ ಪರದೆಯ ಮೇಲೆ ಕ್ಲಿಕ್ಕಿಸುವುದೂ ಕೊನೆಯ ಹಂತದಲ್ಲಿಯಷ್ಟೆ!.

ಕಾರಣ ನನ್ನ ಕಥೆ, ಕವನ, ಬರಹಗಳೆಲ್ಲವೂ ಮೆದುಳಿನಲ್ಲಿ ಉದ್ಭವವಾದಮೇಲೆ, ಅಲ್ಲಿಯೇ ಯಥೇಚ್ಛವಾಗಿ ತಮಗೆ ಬೇಕೆನಿಸಿದ ಜಾಡನ್ನು ಹಿಡಿದು, ತಮ್ಮಷ್ಟಕ್ಕೆ ತಾವೇ ಬರೆದುಕೊಂಡು ಹೋಗುತ್ತಿರುತ್ತವೆ. ಹಳಿಯ ಮೇಲೆ ವೇಗವಾಗಿ ಚಲಿಸಿದ ರೈಲು, ಸಂಚಾರ ಮುಗಿಸಿ ಗಾಲಿಗಳನ್ನು ಉಜ್ಜಿಕೊಂಡು ನಿಧಾನವಾಗಿ ನಿಲ್ಲುವಂತೆ, ನನ್ನ ಮೆದುಳು ರಚಿಸಿಕೊಂಡು ಮುಗಿಸಿದ ಬರಹಗಳು ನನ್ನ ಗಮನಕ್ಕಾಗಿ ಕಾಯುತ್ತ, ಮೆದುಳಿನ ಬೂದು ಜೀವಕೋಶಗಳಲ್ಲಿ ಹಾಗೆಯೇ ವಾರ, ತಿಂಗಳುಗಳನ್ನು ಬೇಸರದಿಂದ ಸವೆಸುತ್ತಿರುತ್ತವೆ! ಅಲ್ಲಲ್ಲಿ ಪದ-ಪಾತ್ರ-ಸನ್ನಿವೇಶಗಳನ್ನು ಸ್ವಲ್ಪ ಮಾರ್ಪಾಟೂ ಮಾಡಿಕೊಂಡು ಪದೇ ಪದೇ ‘ಮೆಚ್ಚುಗೆಯಾಯಿತೆ?’ ಎಂದು ಪಿಸುಮಾತಿನಲ್ಲಿ ನನ್ನನ್ನು ಕೇಳಿಕೊಂಡು ಮಿಸುಕಾಡುತ್ತಿರುತ್ತವೆ!. ಈ ಹನ್ನೊಂದು ಕಥೆಗಳ ಸಂಕಲನದಲ್ಲಿನ ಕೆಲವು ಕಥೆಗಳು ಈ ಹಿಂದೆ ತರಂಗ ವಾರಪತ್ರಿಕೆ ಹಾಗೂ ತುಷಾರ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಮೆದುಳಿನಲ್ಲಿ ಅನೇಕ ಹಳಿಗಳು ಈಗಲೂ ಸಕ್ರಿಯವಾಗಿ ತುಡಿಯುತ್ತಿವೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು. 

About the Author

ಶಾಂತಲ

ಡಾ. ಶಾಂತಲ ಅವರು ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಹಾಗೂ ದೆಹಲಿಯ ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ ವಿಷಯಗಳ ಕುರಿತು ಅಂಕಣಗಳನ್ನು ಬರೆಯುತ್ತಾರೆ. ಸೈನ್ಸ್ ಫಿಕ್ಶನ್ ಪ್ರಕಾರವನ್ನು ಹೆಚ್ಚಾಗಿ ಇಷ್ಟಪಡುವ ಶಾಂತಲ ಅವರು ಕಥೆ ಕಾದಂಬರಿಗಳನ್ನು ಬರೆದಿದ್ದಾರೆ. 3019 A.D.-ಎಂಬುದು ಇವರ ಫಿಕ್ಶನ್ ಕಾದಂಬರಿ. . .   ...

READ MORE

Related Books