ಸೂಫಿ ಬ್ಯಾರಿಯ ಜಕಾತ್ ಯಾತ್ರೆ ಹಂಝ ಮಲಾರ್ ಅವರ ಕಥಾಸಂಕಲನವಾಗಿದೆ. ವಯಸ್ಸಿಗೂ ಮೀರಿದ ಪ್ರತಿಭೆಯನ್ನು ಹೊಂದಿದ ಎಳೆಯ ಹುಡುಗನೊಬ್ಬ ದಿಟ್ಟತನದಿಂದ ತನ್ನ ಸಮಾಜದ ಹುಳುಕುಗಳನ್ನು ಕಥೆಗಳನ್ನಾಗಿಸಿ ಹೇಳುವುದೇನೂ ಸುಲಭವೂ ಅಲ್ಲ; ಹುಡುಗಾಟವೆಂದು ತಳ್ಳಿಹಾಕುವಂತೆಯೂ ಇಲ್ಲ. ಪತ್ರಕರ್ತ, ತರುಣ ಲೇಖಕ ಹಂಝ ಮಲಾ ಲೇಖನಿಯಿಂದ ಮೂಡಿಬಂದ ಅಪ್ಪಟ ಬ್ಯಾರಿ ಜನಾಂಗದ ಹತ್ತು ಕಥೆಗಳು ನಮ್ಮನ್ನು ವಿಸ್ಮಯಗೊಳಿಸುತ್ತವೆ.
ಹಂಝ ಮಲಾರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಅವರು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದಾರೆ. ಅನೇಕ ಗೋಷ್ಠಿಗಳಲ್ಲಿ ಕವನ ವಾಚನಗಳನ್ನು ಮಾಡಿದ್ದಾರೆ. ...
READ MORE