ಯಶವಂತ ಚಿತ್ತಾಲ ಸಮಗ್ರ ಕಥೆಗಳು ಸಂಪುಟ - 1

Author : ಯಶವಂತ ಚಿತ್ತಾಲ

Pages 700

₹ 360.00




Year of Publication: 2012
Published by: ಪ್ರಿಸಂ ಬುಕ್ಸ್

Synopsys

ಚಿತ್ತಾಲರ ಸಮಗ್ರ ಕತೆಗಳ ಮೊದಲ ಸಂಪುಟವಿದು. ಕತೆಗಳ ಬಗ್ಗೆ ’ಆಟ’ಕ್ಕೆ ಬರೆದ ಮುನ್ನುಡಿಯಲ್ಲಿ ಗೋಪಾಲಕೃಷ್ಣ ಅಡಿಗರು ’ಈ ಸಣ್ಣ ಕಥೆಗಳು ಅಭ್ಯಾಸಯೋಗ್ಯವಾದ, ಮತ್ತೆ ಮತ್ತೆ ಓದಿ ತಿಳಿಯಬೇಕಾದಷ್ಟು ಘನತೆ ಸಾಂದ್ರತೆಗಳುಳ್ಳ ಕೃತಿಗಳು; ಕೆಲವು ವಿಷಯಗಳಲ್ಲಿ ಕನ್ನಡಕ್ಕೆ ಅಪೂರ್ವ ಎನ್ನಿಸುವಂಥ ಕಾಣಿಕೆಗಳು. ಈ ಕತೆಗಳ ಭಾಷೆಯಲ್ಲಿ ಇನ್ನೂ ಎಲ್ಲೂ ಕಾಣಲು ಸಿಗದ ಒಂದು ಆತ್ಮೀಯತೆ, ಸಹಜತೆ, ಮಣ್ಣಿನ ವಾಸನೆ ಇದೆ’ ಎಂದು ಮೆಚ್ಚುಗೆ ಸೂಚಿಸಿದ್ದರು.

ವಿಮರ್ಶಕ ಜಿ.ಎಸ್. ಆಮೂರ ಅವರು ’ಗೋಪಾಲಕೃಷ್ಣ ಅಡಿಗರ ಕಾವ್ಯ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಮುಖ ಪ್ರವಾಹಗಳನ್ನು ಪ್ರತಿನಿಧಿಸಿದರೆ ಚಿತ್ತಾಲರ ಕತೆಗಳು ಈ ಕಾರ್ಯವನ್ನು ಕಥಾಸಾಹಿತ್ಯದ ಕ್ಷೇತ್ರದಲ್ಲಿ ನೆರವೇರಿಸುತ್ತವೆ. ಚಿತ್ತಾಲರಿಗೆ ಕೇಂದ್ರ ಸಾಹಿತ್ಯ, ಅಕಾಡೆಮಿಯ ಪುರಸ್ಕಾರ ದೊರೆತದ್ದು ಅವರ 'ಕತೆಯಾದಳು ಹುಡುಗಿ'ಗಾದರೂ ಈ ಗೌರವ ಅವರ ಒಟ್ಟೂ ಸಾಧನೆಯ ಮೇಲೆ ಯೋಗ್ಯತೆಯ ಮುದ್ರೆಯೊತ್ತಿದೆ ಎಂದು ಹೇಳಬೇಕು’ ಎಂದು ಅಭಿಪ್ರಾಯಪಟ್ಟಿದ್ದರು.

ಮತ್ತೊಬ್ಬ ಕತೆಗಾರ ವಿವೇಕ ಶಾನಭಾಗ ಅವರು ’ಹನೇಹಳ್ಳಿಯು ಚಿತ್ತಾಲರ ಕಥಾಸಾಹಿತ್ಯದ ಅತ್ಯಂತ ಪ್ರಮುಖ ಪಾತ್ರವಾಗಿದೆ. ಅವರ ಕಥಾಲೋಕದಲ್ಲಿ ಹನೇಹಳ್ಳಿಯಿಲ್ಲದ ಜಾಗವಿಲ್ಲ. ಬಹುತೇಕ ಕಥೆಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಅನೇಕ ಕಡೆ ಹೆಸರನ್ನೇ ಎತ್ತದಿರುವಾಗಲೂ ಅಪ್ರತ್ಯಕ್ಷವಾಗಿ ಹನೇಹಳ್ಳಿ ಇದೆ. ಪ್ರಜ್ಞೆಯಾಗಿ, ಮೌಲ್ಯವಾಗಿ, ಅಳತೆಗೋಲಾಗಿ ಇದೆ. ಮೊದಮೊದಲ ಕತೆಗಳಲ್ಲಿ ವಾಸ್ತವ ಪ್ರದೇಶದಂತೆ ತೋರಿದ ಹನೇಹಳ್ಳಿಯು ಬರಬರುತ್ತ ಪಡೆದುಕೊಂಡ ರೂಪಕದ ಆಕಾರವು ಅತ್ಯಂತ ವಿಶಾಲವೂ ವಿಶ್ವಾತ್ಮಕವೂ ಆಗಿದೆ. ಈ ಒಂದು ಬಿಂದುವಿನಲ್ಲಿ ನಿಂತು ಜಗತ್ತನ್ನು ಅದರ ನಾನಾ ಆಯಾಮಗಳಲ್ಲಿ ನೋಡಲು ಅವರಿಗೆ ಅನುವು ಮಾಡಿಕೊಟ್ಟಿದೆ’ ಎಂದು ವಿವರಿಸಿದ್ದರು.

About the Author

ಯಶವಂತ ಚಿತ್ತಾಲ
(03 August 1928 - 22 March 2014)

ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ.  ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ...

READ MORE

Related Books