‘ನನ್ನಯ್ಯ ಚಾರಿತ್ರ’ ಕೃತಿಯು ಎಂ.ಮಂಜಪ್ಪ ಶೆಟ್ಟಿ ಅವರ ಗ್ರಂಥವಾಗಿದೆ. ಪರ್ವತದೇವ ವಿರಚಿತ ಈ ಕೃತಿಯಲ್ಲಿ ಮುನ್ನುಡಿ, ವಿಭಾಗ ಸಂಪಾದಕರ ಮಾತು, ವಿಷಯ ಸೂಚಿ, ಪ್ರಸ್ತಾವನೆ, ಒಂದನೆಯ ಸಂಧಿ, ಪೀಠಿಕೆ, ಸಮುದ್ರ, ಮೇರು, ದೇಶ, ಪ್ರರಾದಿಗಳ ವರ್ಣನೆ; ಕಲ್ಯಾಣಕ್ಕೆ ನನ್ನಯ್ಯ ಮತ್ತು ಸುಜ್ಞಾನಿಯ ಆಗಮನ, ಸುಜ್ಞಾನಿ ಮಾತಂಗ ತವನನ್ನು ಸಂಧಿಸಿದ್ದು ಎನ್ನುವ ವಿಚಾರವನ್ನು ಇಲ್ಲಿ ನೀಡಲಾಗಿದೆ. ಎರಡನೆಯ ಸಂಧಿ, ಪರೀಕ್ಷಿತರಾಯ, ಜನಮೇಜಯ, ಇದ್ದುದನಾಡಿ ಗುದ್ದಿಸಿಕೊಂಡವನು, ಕೋಡಗ ಮತ್ತು ಬ್ರಹ್ಮಚಾರಿ-ಇವರ ಕಥೆ, ಮೂರನೆಯ ಸಂಧಿ, ತಾರಕಾಸುರ, ಸೀತೆ, ಪ್ರೌಪದಿ, ಯಶೋಧರರಾಯ, ಧನಸೇನರ ಕಥೆಯನ್ನು ಒಳಗೊಂಡಿದೆ. ನಾಲ್ಕನೆಯ ಸಂಧಿ ವಿಭಾಗದಲ್ಲಿ ವರರುಚಿ, ಕಾರ್ತವೀರ್ಯ, ರತ್ನದ, ನೇರಲಹಣ್ಣು, ನರಿ, ದೇವ, ಶರ್ಮರ ಕಥೆ ಒಳಗೊಂಡಿದೆ. ಐದನೆಯ ಸಂಧಿ ವಿಭಾಗದಲ್ಲಿ ಪರ್ದವಿಜಯ, ಸುಮನಸ, ಗಿಳಿಯ ಮರಿ, ರುಭವ, ಸುಸೇನ, ಗಣದೀಕ್ಷಿತರ ಸಭೆ, ಆರನೆಯ ಸಂಧಿ ವಿಭಾಗದಲ್ಲಿ ವದನವಿಜಯ, ಭಾಜಿಕರ ಕಥೆಯಿದೆ.
ಎಂ.ಪಿ.ಮಂಜಪ್ಪ ಶೆಟ್ಟಿ ಚಿಕ್ಕಮಗಳೂರು ಜಿಲ್ಲೆಯ ಮಸಗಲಿಯವರು. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೃಷಿಯನ್ನು ಮಾಡಿರುವ ಅವರು ವ್ಯಕ್ತಿಚಿತ್ರಗಳನ್ನು ರಚಿಸಿರುತ್ತಾರೆ. ಕೃತಿಗಳು: ನನ್ನಯ್ಯ ಚಾರಿತ್ರ, ಗುರುದತ್ತ ಚರಿತ್ರೆ, ಕೃಷ್ಣರಾಜ ವಿಲಾಸ, ಕಾವೇರಿ ಮಹಾತ್ಮೆ, ಚೆಲುವಾಂಬೆಯ ಕೃತಿಗಳು, ...
READ MORE