ಖ್ಯಾತ ಲೇಖಕ-ಪತ್ರಕರ್ತ ಪಿ.ಲಂಕೇಶ ಅವರ ‘ಉಲ್ಲಂಘನೆ ಮತ್ತು ಇತರ ಕತೆಗಳು’ ಕತಾ ಸಂಕಲನವಾಗಿದೆ.ಇಲ್ಲಿನ ಕೆಲವೊಂದು ಕತೆಗಳು ಲೇಖಕರ ಬರವಣಿಗೆಯಲ್ಲಿ ಮೂಡಿದ್ದರೆ, ಇನ್ನೂ ಕೆಲವು ಅನುವಾದಗೊಂಡಿರುವ ಕತೆಗಳಾಗಿವೆ. ಉಲ್ಲಂಘನೆಯ ಕೃಷ್ಣಮೂರ್ತಿ, ಕೆಂಚನಂತಹ ಪಾತ್ರಗಳಲ್ಲಿ, ನಾಗರಾಜನಲ್ಲಿ , ಕೃಷ್ಣಧಾರಾ ನದಿ ಇವುಗಳೆಲ್ಲಾ ಇಂದಿಗೂ ಸಮಾಜದ ಓರೆಕೋರೆಗಳನ್ನು, ಕ್ರಾಂತಿಯಾಗಬೇಕು ಅನ್ನುವವರನ್ನು ಬಿಂಬಿಸಿದಂತೆ ಕಾಣುತ್ತದೆ. ಉಳಿದಂತೆ ಧನ್ಯತೆಯ ಕೃಷ್ಣಪ್ಪ, ಪದ್ಮಶ್ರೀ ಸಂಗಮೇಶ್, ತರಕಾರಿ ಕಣ್ಣಪ್ಪನ ಅಂತಿಮ ದಿನಗಳು ಕೊಂಚ, ಅನುವಾದಿತ ಕಥೆಗಳಲ್ಲಿನ ಲಿಸಾನ ಪಾತ್ರಗಳು ನೆನಪಿನಲ್ಲುಳಿಯುತ್ತವೆ. ಚಂದ್ರಪ್ಪಗೌಡರಿಗೆ ಬಿದ್ದ ಕನಸು, ಅಣ್ಣನ ನೆನಪು ಕತೆಯಲ್ಲಿ ಬರೋ ಚೆರ್ರಿ ಅನ್ನೋ ಸಾವನ್ನು, ಕಾಯಿಲೆಯನ್ನು ಗ್ರಹಿಸೋ ನಾಯಿ, ಯುವ ಜನರ ವಾಣಿಯಂತಿರೋ ಜಯಂತನ ಸ್ವಗತ, ಇಂಥವು ಸಮಾಜದ ಹಲವು ಕೊಳಕುಗಳ ಅನಾವರಣದಂತೆ ಭಾಸವಾಗುತ್ತದೆ.
ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...
READ MORE