‘ಕತ್ತಲೂರಿನ ಬೆಳಕು’ ಎ. ಎಸ್. ಮಕಾನದಾರ ಮತ್ತು ಎಸ್.ವ್ಹಿ. ಕಮ್ಮಾರ ಅವರ ಸಂಪಾದನೆಯ ಕಥಾಸಂಕಲನವಾಗಿದೆ. ಐದು ಜನ ಮುಸ್ಲಿಂ ಲೇಖಕರ ಕತೆಗಳನ್ನು ಈ ಕೃತಿ ಒಳ ಗೊಂಡಿರುವುದು ಗಮನಾರ್ಹ. ಕಲಾತ್ಮಕ ದೃಷ್ಟಿಯಿಂದ ಅನುಭವಗಳ ಶೋಧನೆಯ ಮೂಲಕ ಕೆಲವು ಕತೆಗಳು ಉತ್ತಮ ಕತೆಗಳೆನ್ನಿಸಿಕೊಂಡರೆ ಮತ್ತೆ ಕೆಲವು ಕತೆಗಳು ಸರಳವಾದ ಚಿಂತನೆಗಳ ವರದಿಯ ಮಟ್ಟದಲ್ಲಿಯೇ ನಿಲ್ಲುತ್ತವೆ. ಅನಿತಾ ಹುಳಿಯಾರವರ “ಉಂಗುರ' ಕತೆ ವಿಭಿನ್ನವಾಗಿ ಗಮನ ಸೆಳೆಯುತ್ತದೆ.
ಲೇಖಕ ಎ. ಎಸ್. ಮಕಾನದಾರ ಅವರ ಹುಟ್ಟೂರು ಗಜೇಂದ್ರಗಡ. ಪ್ರಸ್ತುತ ಗದುಗಿನ ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 10 ಸ್ವತಂತ್ರ ಕೃತಿಗಳನ್ನು, 16 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎಸ್.ಡಬ್ಲೂ ಮೊದಲ ಸೆಮಿಸ್ಟರ್ ಗೆ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ’ ಎಂಬ ಇವರ ಕವಿತೆ ಪಠ್ಯ ವಾಗಿ ಸೇರ್ಪಡೆ ಯಾಗಿದೆ. ಪ್ರಶಸ್ತಿ-ಗೌರವಗಳು: ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಸಂತ ಶಿಶುನಾಳ ಶರೀಫ ಪುರಸ್ಕಾರ, ಭಾವೈಕ್ಯ ಪುರಸ್ಕಾರ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ, ಕೊಪಳ ...
READ MOREಹೊಸತು- ಜುಲೈ-2005
'ಕರ್ನಾಟಕದ ಪ್ರಾತಿನಿಧಿಕ ಕಥಾ ಸಂಪುಟ' ಎಂದು ಘೋಷಿಸಿಕೊಳ್ಳುವ ಅವಶ್ಯಕತೆಯಿರಲಿಲ್ಲ. ಏಕೆಂದರೆ ಯಾವುದೇ ಸಂಕಲನ ಸಂಪಾದಕರ ವೈಯಕ್ತಿಕ ಅಭಿರುಚಿಯ ಹಿನ್ನೆಲೆಯಲ್ಲಿ ರೂಪಿತವಾಗಿರುವುದರಿಂದ ಎಲ್ಲ ದೃಷ್ಟಿಯಲ್ಲಿ ಪ್ರಾತಿನಿಧಿಕತೆ ಸಾಧ್ಯವಿಲ್ಲ. ಪರಿವಿಡಿಯಲ್ಲಿ ಕತೆಗಳ ಹೆಸರಿನ ಜೊತೆಯಲ್ಲಿ ಲೇಖಕರ ಹೆಸರು ಇರಬೇಕಿತ್ತು, ಕುಂ. ವೀರಭದ್ರಪ್ಪ, ಅಮರೇಶ ನುಗಡೋಣಿ ಅಂತಹ ಶ್ರೇಷ್ಠ ಕತೆಗಾರರ ಕತೆಗಳನ್ನು ಈ ಸಂಕಲನ ಒಳಗೊಂಡಿದೆ. ದಲಿತ-ಬಂಡಾಯ ಚಳುವಳಿಯ ಆಶಯಗಳನ್ನು, ಸ್ತ್ರೀವಾದಿ ದೃಷ್ಟಿಕೋನಗಳನ್ನು ಕೆಲವು ಕತೆಗಳಲ್ಲಿ ಗುರುತಿಸಬಹುದು. ಐದು ಜನ ಮುಸ್ಲಿಂ ಲೇಖಕರ ಕತೆಗಳನ್ನು ಈ ಕೃತಿ ಒಳ ಗೊಂಡಿರುವುದು ಗಮನಾರ್ಹ. ಕಲಾತ್ಮಕ ದೃಷ್ಟಿಯಿಂದ ಅನುಭವಗಳ ಶೋಧನೆಯ ಮೂಲಕ ಕೆಲವು ಕತೆಗಳು ಉತ್ತಮ ಕತೆಗಳೆನ್ನಿಸಿಕೊಂಡರೆ ಮತ್ತೆ ಕೆಲವು ಕತೆಗಳು ಸರಳವಾದ ಚಿಂತನೆಗಳ ವರದಿಯ ಮಟ್ಟದಲ್ಲಿಯೇ ನಿಲ್ಲುತ್ತವೆ. ಅನಿತಾ ಹುಳಿಯಾರವರ “ಉಂಗುರ' ಕತೆ ವಿಭಿನ್ನವಾಗಿ ಗಮನ ಸೆಳೆಯುತ್ತದೆ.