ಲೇಖಕ, ಪತ್ರಕರ್ತ ಮಂಜುನಾಥ ಎಂ. ಅದ್ದೆಯವರ ಕವನ ಸಂಕಲನ ‘ಕನ್ನಡಿ ಕಣ್ಣು’, ಜಾತಿ ಗೆರೆಗಳನ್ನು ದಾಟಿ ಯೋಚಿಸಬಲ್ಲ ಸಂವೇದನಾಶೀಲ ವ್ಯಕ್ತಿ ಮಾತ್ರ ಸಂವೇದನಾಶೀಲ ಕವಿ, ಲೇಖಕ, ನಾಯಕನೆನಿಸಿಕೊಳ್ಳಬಲ್ಲ. ಈ ಮೂರು ಗುಣಗಳು ಮಂಜುನಾಥ್ ಅದ್ದೆಯವರ ಕೃತಿಯಲ್ಲಿ, ನಡೆಯಲ್ಲಿ, ನುಡಿಯಲ್ಲಿ ಇರುವ ಕಾರಣ ಅವರ ಕೃತಿಗಳು ಓದುಗರಿಗೆ ಆಪ್ತವಾಗಬಲ್ಲವು.
ಸಮುದಾಯಗಳ ನೋವಿಗೆ ತುಡಿವ ಅದ್ದೆಯವರ ಕವಿತೆಗಳಲ್ಲಿ ಜೀವಕಾರುಣ್ಯವನ್ನು ಕಾಣಬಹುದು.
ಪತ್ರಿಕೋದ್ಯಮ, ಸಾಹಿತ್ಯ, ಹೋರಾಟ- ಈ ಮೂರೂ ದೋಣಿಗಳಲ್ಲಿ ಪಯಣಿಸುತ್ತಿರುವ ಮಂಜುನಾಥ ಅದ್ದೆ ಅವರದ್ದು ಪ್ರತಿಭಾವಂತ ವ್ಯಕ್ತಿತ್ವ. ಬೆಂಗಳೂರು ಉತ್ತರ ತಾಲ್ಲೂಕಿನ ಅದ್ದೆ ಗ್ರಾಮದವರಾದ ಮಂಜುನಾಥ್ ಮೂಲತಃ ಕೃಷಿಕ ಕುಟುಂಬಕ್ಕ ಸೇರಿದವರು. 1973ರ ನಡುಭಾಗದಲ್ಲಿ ಹುಟ್ಟಿದ ಮಂಜುನಾಥ್ ಅವರ ತಂದೆ ಮುನಿಹನುಮಯ್ಯ, ತಾಯಿ-ಲಕ್ಷ್ಮಮ್ಮ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ನಂತರ ಬದುಕಿನ ಮಾರ್ಗದ ಬಗ್ಗೆ ಅವರಿಗೆ ಗೊಂದಲಗಳೇ ಇರಲಿಲ್ಲ. ದೊಡ್ಡಬಳ್ಳಾಪುರದ ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಈ ಹೊತ್ತಿಗಾಗಲೇ ಸಮಾಜಮುಖಿ ಚಳವಳಿ, ಹೋರಾಟಗಳಲ್ಲಿ ತೊಡಗಿಕೊಂಡಿದ್ದ ಮಂಜುನಾಥ್ ಅದ್ದೆ ಹಲವು ಸಂಸ್ಥೆಗಳನ್ನು ಹುಟ್ಟುಹಾಕಿದ್ದರು. ತನ್ನೊಳಗಿನ ...
READ MORE