ಅನರ್ಥ ಕ್ಷಿತಿಜ ಬೀದರ್ ಅವರ 11 ಕತೆಗಳ ಸಂಗ್ರಹ. ಮೊದಲ ಕತೆಗೆ ಶೀರ್ಷಿಕೆ ’ಕ್ರಿಯೆ’ ಎಂದು ಹೆಸರಿಸಿದ್ದರು. ಪ್ರಕಾಶಕರು ಅದನ್ನು ಬದಲಿಸಿ 'ದೇವರ ಹೆಣ' ಎಂದು ಬದಲಿಸಿದ್ದರು. ಇದೇ ಶೀರ್ಷಿಕೆಯ ಕುಂ.ವೀರಭದ್ರಪ್ಪ ಅವರ ಒಂದು ಕತೆಯಿದೆ ಎಂದು ಲೇಖಕರು ವಿಷಾದಿಸಿದ್ದರು. 11 ಕತೆಗಳೂ ಲೇಖಕರ ಪ್ರಾರಂಭಿಕ ಬರಹಗಳು. ಸರಾಗವಾಗಿ ಓದಿಸಿಕೊಂಡು ಹೋಗುವ ಗುಣ ಕತೆಗಳ ವಿಶೇಷ.
’ಕ್ಷಿತಿಜ್ ಬೀದರ್’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...
READ MORE