ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಸ್ತ್ರೀ ಶೋಷಣೆಯ ವಿವಿಧ ಮುಖಗಳನ್ನು ಈ 'ಮುತ್ತಿನ ಸಂಕೊಲೆ’ ಕತಾಸಂಕಲನದಲ್ಲಿ ಕಾಣಬಹುದಾಗಿದೆ. ಬಿಡುವಿಲ್ಲದೆ ಯಾಂತ್ರಿಕವಾಗಿ ಸಾಗುತ್ತಿರುವ ಆಧುನಿಕ ಬದುಕಿನ ದುಸ್ಥಿತಿಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ಹಿಡಿದಿಟ್ಟಿದ್ದಾರೆ ಲೇಖಕ ಡಾ. ಮಲ್ಲಿನಾಥ ತಳವಾರ. ಈ ಕೃತಿಯು ಎಂಟು ಕತೆಗಳನ್ನು ಒಳಗೊಂಡಿದೆ.
ಲೇಖಕ ಮಲ್ಲಿನಾಥ ಶಿ. ತಳವಾರ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು (ಜನನ: 11-07-1979) ಗ್ರಾಮದವರು. ಗುಲಬರ್ಗಾ ವಿ.ವಿ.ಯಿಂದ ಎಂ.ಎ. ಬಿ.ಇಡಿ, ಹಾಗೂ ಹಂಪಿಯ ಕನ್ನಡ ವಿ.ವಿ.ಯಿಂದ ಪಿಎಚ್ ಡಿ (ಕಾರಂತರ ಕಾದಂಬರಿಗಳ ಸ್ತ್ರೀಪ್ರಪಂಚ) ಪದವೀಧರರು. ಚಿತ್ತಾಪುರದ ಶ್ರೀ ಗಂಗಾ ಪರಮೇಶ್ವರಿ ಡಿ.ಎಡ್ ವಿದ್ಯಾಲಯದಲ್ಲಿ ಉಪನ್ಯಾಸಕರು. ನಂತರ 2009 ರಿಂದ ಕಲಬುರಗಿಯ ನೂತನ ಪದವಿ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರು. ರಾವೂರು ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಚಿತ್ತಾಪುರ ತಾಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಿತ್ತಾಪುರ ತಾಲೂಕು ಘಟಕ ಅಧ್ಯಕ್ಷರು, ಕನ್ನಡ ...
READ MORE