‘ಕನಸಿನಲ್ಲಿ ಕಂಡ ಹಾದಿ’ ಕೇಶವಕುಡ್ಲ ಅವರ ಕಥಾಸಂಕಲನವಾಗಿದೆ. ಬಾಲ್ಯ ಮತ್ತು ಯೌವನದ ಸಂದಿಗ್ದ ಕಾಲದಲ್ಲಿ ಹಳ್ಳಿಯಲ್ಲಿ ನೆಲೆಸಿದ್ದೆವು. ತಾಯಿಯ ತವರು ಮತ್ತು ತಂದೆಯ ಮೂಲ ನೆಲೆ ಹಳ್ಳಿಯೆ ಆಗಿದ್ದ ಕಾರಣ ಅಲ್ಪಸ್ವಲ್ಪ ಹಳ್ಳಿಯ ಪರಿಚಯವಿದ್ದರೂ ಹಳ್ಳಿಯಲ್ಲೆ ಕಳೆದ ಆ ಸಮಯದಲ್ಲಿ ಹಳ್ಳಿತನವು ಮನಸ್ಸಿಗೆ ವಿಶೇಷವಾಗಿ ಹತ್ತಿರವಾಗಿತ್ತು ಎಂದು ಲೇಖಕರು ಕೃತಿಯ ಬಗ್ಗೆ ತಿಳಿಸಿದ್ದಾರೆ.
ಕೇಶವ ಕುಡ್ಲ ಅವರು ಮೂಲತಃ ದಕ್ಷಿಣ ಕನ್ನಡದವರು. ವಿಮಾಕಂಪೆನಿಯಲ್ಲಿ ಮೂರು ದಶಕ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಮುಖ್ಯವಾಗಿ ಕೀಟ ಲೋಕದ ಛಾಯಾಗ್ರಹಣ, ಚಾರಣ ಮತ್ತು ಬರವಣಿಗೆ ಅವರ ಪ್ರಿಯ ಹವ್ಯಾಸ. ಇದುವರೆಗೆ 112 ಕಥೆಗಳು ಮತ್ತು ಒಂದು ಕಾದಂಬರಿ ಪ್ರಕಟವಾಗಿರುತ್ತದೆ., 400ಕ್ಕೂ ಹೆಚ್ಚು ಲೇಖನಗಳು ಮತ್ತು ಅದಕ್ಕೆ ಪೂರಕವಾಗಿ ಸುಮಾರು 2000 ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಶಸ್ತಿಗಳು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಬಹುಮಾನ, ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೃತಿಗಳು: ಒಡಲಾಳದ ಕತೆಗಳು, ಕಥಾ ಪಯಣ’ ...
READ MORE