‘ಭೂಮಿ ಗೀತೆಗಳು- ಈಶಾನ್ಯ ಭಾರತದ ಕಥೆಗಳು’ ಕೃತಿಯ ಮೂಲ ಕರ್ತೃ ಕೈಲಾಸ್ ಸಿ. ಬರಾಲ್. ಲೇಖಕ ಹೆಚ್.ಎಸ್.ಎಂ. ಪ್ರಕಾಶ್ ಅವರು ಕನ್ನಡೀಕರಿಸಿದ್ದಾರೆ. ಈ ಕೃತಿಯಲ್ಲಿ ಹದಿನಾರು ಕಥೆಗಳಿವೆ, ಈಶಾನ್ಯ ಭಾರತದ ಬದುಕಿನ ವಿಶಿಷ್ಟತೆಯ ವಿವಿಧ ಮುಖಗಳಾದ ಮುಗ್ಧತೆ, ಹಿಂಸೆ, ಭ್ರಷ್ಟಾಚಾರ, ಪ್ರಣಯ, ಪ್ರೇಮ, ಹಾಸ್ಯ ಮತ್ತು ಅತೀಂದ್ರಿಯಗಳನ್ನು ಪ್ರತಿನಿಧಿಸುತ್ತವೆ. ಅನೇಕ ಬಗೆಯಲ್ಲಿ ಮಾನವ ಸಂಬಂಧಗಳು, ಸೆಳೆತಗಳು ಮತ್ತು ಅವುಗಳಲ್ಲಿ ಸೂಕ್ಷ್ಮತೆಗಳನ್ನು ಕೇಂದ್ರೀಕರಿಸುತ್ತವೆ. ಬಹು ಹಿರಿಯ ಲೇಖಕರ ಕಥೆಗಳ ಜೊತೆಗೆ ಯುವ ಪ್ರತಿಭಾವಂತ ಲೇಖಕರ ಕಥೆಗಳೂ ಸೇರಿ, ಸಾಂಸ್ಕೃತಿಕ ಜೀವನದ ಮತ್ತು ಸಾಮಾಜಿಕ ಚಲನ ಶೀಲತೆ ಯಲ್ಲಿಯ ಬದಲಾವಣೆಗಳ ಅನುಭವವನ್ನು ಕೊಡುತ್ತವೆ. ಜೀವನವನ್ನು ಬಗೆದು ತೋರಿಸುವಲ್ಲಿ ವಿಶ್ವವ್ಯಾಪಿಯಾಗುವ ಹಂಬಲವನ್ನು ಹೊಂದಿವೆ.