‘ಕತೆಯಾದಳು ಅಜ್ಜಿ’ ದಮಯಂತಿನರೇಗಲ್ ಅವರ ಕಥಾಸಂಕಲನವಾಗಿದೆ. ಕಾಲ ಬದಲಾದಂತೆ ಅಳು-ನಗುವಿನ ಅಲೇ ಅಲೆಗಳಲ್ಲಿ ತೇಲಿಸುತ್ತ ಸಾಗುವ ಜೀವನದ ಘಟನೆಗಳನ್ನು ವಿವಿಧ ಕೋನಗಳಿಂದ ಸೆರೆಹಿಡಿದ ಉತ್ತಮ ಕಥಾ ಸಂಕಲನ.
ಕಾದಂಬರಿಗಾರ್ತಿ, ಅನುವಾದಕಿ ದಮಯಂತಿ ನರೇಗಲ್ಲ ಅವರು ಇಂಗ್ಲಿಷ್ ಪ್ರಾಚಾರ್ಯರಾಗಿದ್ದು 1937 ಮೇ 12 ರಂದು ವಿಜಾಪುರ ಜಿಲ್ಲೆಯ ಬಾಗಲಕೋಟೆ ಯಲ್ಲಿ ಜನಿಸಿದರು. “ತೇರನೆಳೆಯ ಬಾರಾ ತಂಗಿ, ತ್ರಿವೇಣಿ, ಯಯಾತಿ ಪ್ರಸಂಗ” ಅವರು ಪ್ರಮುಖ ಕಾದಂಬರಿಗಳು. ತೇರನೆಳೆಯ ಬಾರತಂಗಿ ಕೃತಿಗೆ ಮಾಸ್ತಿ ಕಾದಂಬರಿ ಪುರಸ್ಕಾರ, ಸಾಹಿತ್ಯ ಪರಿಷತ್ತಿನ ಬಹುಮಾನ, ಬೀದಿ ನಾಟಕ ಸ್ಪರ್ಧೆಯಲ್ಲಿ 2ನೇ ಬಹುಮಾನ ಸಂದಿದೆ. ಮಃಆರಾಷ್ಟ್ರದಲಲ್‌ಇ ಸಂಗೀತ ವಿಮರ್ಶಕರೆಂದೇ ಪ್ರಸಿದ್ಧವಾಗಿರುವ ಅರವಿಂದ ಗಜೇಂದ್ರಗಡಕರ ’ಅಸೇ ಸೂರ,.. ಅಶೀ ಮಾಣಸ’ ಎಂಬ ಪುಸ್ತಕವನ್ನು ಕನ್ನಡಕ್ಕೆ ತಂದಿದ್ಧಾರೆ ದಮಯಂತಿ ನರೇಗಲ್ಲ ಅವರು. ...
READ MOREಹೊಸತು-2002- ಫೆಬ್ರವರಿ
ಕಾಲ ಬದಲಾದಂತೆ ಅಳು-ನಗುವಿನ ಅಲೆಅಲೆಗಳಲ್ಲಿ ತೇಲಿ ಮುಳುಗುತ್ತಾ ಸಾಗುವ ಜೀವನದ ಘಟನೆಗಳನ್ನು ವಿವಿಧ ಕೋನಗಳಿಂದ ಸೆರೆಹಿಡಿದ ಉತ್ತಮ ಕಥಾ ಸಂಕಲನ. ಬಾಲ್ಯದಿಂದ ಮುಪ್ಪಿನ - ಸಾವಿನ ಹಂತದವರೆಗೆ ಮಾನವ ತನ್ನ ಬಾಳಗೀತೆಗಳನ್ನು ವಿವಿಧ ರಾಗಗಳಿಗಳವಡಿಸಿ ಹಾಡುವ ಪರಿ ಮನೋಜ್ಞವಾಗಿ ಕಥೆಗಳಲ್ಲಿ ಬಿಂಬಿಸಿದೆ. ಬಹಳ ಸೂಕ್ಷ್ಮವಾದ ಲೇಖಕಿಯ ಮನಸ್ಸು ನಮ್ಮ ಸುತ್ತಮುತ್ತ ನಡೆಯುವ ಕ್ಷಣಕ್ಕೊಂದರಂತೆ ತಿರುವು ಪಡೆಯುವ ಘಟನೆಗಳನ್ನು ಕಥೆಗಳನ್ನಾಗಿಸ ಬಲ್ಲದು. ಹದಿಮೂರು ಕಥೆಗಳ ಸಂಕಲನ.