ಒಡಲಾಳದ ತಳಮಳ

Author : ಕೇಶವ ಕುಡ್ಲ

Pages 158

₹ 95.00




Year of Publication: 2011
Published by: ಆಕೃತಿ ಪುಸ್ತಕ
Address: 31/1, ನೆಲಮಹಡಿ, 12ನೇ ಮುಖ್ಯರಸ್ತೆ, ಗಾಯತ್ರಿನಗರ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560010
Phone: 098866 94580, 080-2340 9479

Synopsys

‘ಒಡಲಾಳದ ತಳಮಳ’ ಎಂಬುದು ಇಲ್ಲಿರುವ ಯಾವುದೆ ಒಂದು ಕಥೆಯ ಹೆಸರಲ್ಲ ಅದರೆ ಇದು ಎಲ್ಲ ಕಥೆಗಳಿಗೆ ಸಾಂಕೇತಿಕವಾದ ಹೆಸರು. ಇಲ್ಲಿನ ಹೆಚ್ಚಿನ ಕಥೆಗಳಲ್ಲಿ ಬರುವ ಪಾತ್ರಗಳು ನಾನಾ ಕಾರಣಗಳಿಂದಾಗಿ ಜೀವನದ ವಿವಿಧ ಘಟ್ಟಗಳಲ್ಲಿ ತಮ್ಮದೆ ತಪ್ಪಿನಿಂದಲೋ ಅಥವ ಅಸಹಾಯಕತೆಯಿಂದಲೋ ನೋವುಗಳನ್ನನುಭವಿಸುತ್ತಾ ಅಂತರಂಗದಲ್ಲಿ ತಳಮಳಮನ್ನು ಅನುಭವಿಸುತ್ತ ಪರಿತಪಿಸುತ್ತಿರುತ್ತವೆ. ಹಾಗಾಗಿ ಈ ಸಂಕಲನಕ್ಕೆ ‘ಒಡಲಾಳದ ತಳಮಳ’ ಎಂಬುದು ಸೂಕ್ತ ಹೆಸರು. ದೇವರನ್ನು ಕಾಣುವ ಹಂಬಲದಲ್ಲಿ ಕನಸು ಕಾಣಲು ಹಪಹಪಿಸುತ್ತ ನಿದ್ದೆಯ ಹಲವಾರು ಮಾರ್ಗಗಳನ್ನು ಶೋಧಿಸಿದ ‘ಬೊನ್ನಣ್ಣಾಯರು ದೇವರಲ್ಲಿ ಐಕ್ಯರಾದದ್ದು’ ಕಥೆಯ ವಿಠ್ಠೋಬ ಬೊನ್ನಣ್ಣಾಯರು, ಹಣದ ಸೆಳೆತಕ್ಕೊಳಗಾಗಿ ಜೀವನವನ್ನು ಹಾಳುಮಾಡಿಕೊಂಡ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಕಥೆಯ ನೀಲ ಲೋಹಿತ, ತನ್ನ ಕರ್ಮಭೂಮಿಯನ್ನು ಬಿಟ್ಟು ದೂರ ಹೋಗಲಾರದೆ ಸುರಂಗ ಪ್ರವೇಶ ಮಾಡಿ ಬದುಕನ್ನು ಅಂತ್ಯಗೊಳಿಸಿಕೊಂಡ ‘ಕರುಳು ಹರಿವ ನೋವ ನೆನೆದು’ ಕಥೆಯ ಸುಬ್ಬಯ್ಯಣ್ಣ, ಕಠೋರ ಅನುಶಾಸನದಿಂದ ತನ್ನವರನ್ನೆಲ್ಲ ದೂರ ಮಾಡಿಕೊಂಡ ‘ಬಣ್ಣಗೆಟ್ಟ ಬದುಕು’ ಕಥೆಯ ಸದಾಶಿವಯ್ಯ, ವಿಶ್ವ ವಿಖ್ಯಾತ ಆರ್ಕಿಟೆಕ್ಟ್ ಆಗಬಯಸಿದ್ದೂ ತನ್ನ ಆಶೆಗಳನ್ನು ಹಾಗೆ ಬಿಟ್ಟು ಸಾಧಾರಣ ಇಂಜಿನಿಯರಾದ ‘ಹೃದಯದೊಳಗೆ ಹುಡುಕಿದ ಸತ್ಯ’ ಕಥೆಯ ವಿಶ್ವಂಭರ, ಬದುಕಿನ ಮಾರ್ಗ ಮುಚ್ಚಿಹೋದಾಗ ಅಸಹಾಯಕತೆಯಿಂದ ವಿಷಣ್ಣನಾಗುವ ‘ಘಾಟಿ ರಸ್ತೆ ಬಂದ್’ ಕಥೆಯ ತುಕಾರಾಮ, ಹೆಂಡತಿಯಿಂದ ತಿರಸ್ಕೃತನಾಗಿ ಬೆಕ್ಕಿನಂತೆ ಮಾರ್ಪಾಡಾಗಲು ಹೊರಟ ‘ಮಾರ್ಜಾಲ ಮತ್ತು ಬಾಲ’ ಕಥೆಯ ಮನೊರೋಗಿ ನಂಜುಂಡ, ‘ವೆಂಕಟ ಎಂಬ ಅಪ್ಪನೂ ನಾಗರತ್ನ ಎಂಬ ಮಗಳೂ’ ಕಥೆಯ ಮತ್ತೊಬ್ಬ ಜವಾಬ್ದಾರಿ ಹೊರಲಿಚ್ಚಿಸದ ಪಲಾಯನವಾದಿ ಅಪ್ಪ ವೆಂಕಟ ಇವರೆಲ್ಲ ನನ್ನ ಕಲ್ಪನೆಯಲ್ಲಿ ಹುಟ್ಟಿಕೊಂಡರೂ ನನಗೆ ಪ್ರಿಯವಾದ ಪಾತ್ರಗಳು.

About the Author

ಕೇಶವ ಕುಡ್ಲ

ಕೇಶವ ಕುಡ್ಲ ಅವರು ಮೂಲತಃ ದಕ್ಷಿಣ ಕನ್ನಡದವರು. ವಿಮಾಕಂಪೆನಿಯಲ್ಲಿ ಮೂರು ದಶಕ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಮುಖ್ಯವಾಗಿ ಕೀಟ ಲೋಕದ ಛಾಯಾಗ್ರಹಣ, ಚಾರಣ ಮತ್ತು ಬರವಣಿಗೆ ಅವರ ಪ್ರಿಯ ಹವ್ಯಾಸ. ಇದುವರೆಗೆ 112 ಕಥೆಗಳು ಮತ್ತು ಒಂದು ಕಾದಂಬರಿ ಪ್ರಕಟವಾಗಿರುತ್ತದೆ., 400ಕ್ಕೂ ಹೆಚ್ಚು ಲೇಖನಗಳು ಮತ್ತು ಅದಕ್ಕೆ ಪೂರಕವಾಗಿ ಸುಮಾರು 2000 ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಶಸ್ತಿಗಳು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಬಹುಮಾನ, ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೃತಿಗಳು: ಒಡಲಾಳದ ಕತೆಗಳು, ಕಥಾ ಪಯಣ’ ...

READ MORE

Related Books