ಚಲಂ ಹಾಡ್ಲಹಳ್ಳಿಯವರ ಕತಾಸಂಕಲನ 'ಪುನರಪಿ'. ಒಟ್ಟು ಸಂಕಲನ ನಮ್ಮ ಸಮಾಜವನ್ನು ಕಟ್ಟಿಕೊಡುವ ಒಂದು ಪ್ರಯತ್ನ. ಕುತೂಹಲದ ಬೆನ್ನುಹತ್ತಿ ಓಡುವುದಕ್ಕಿಂತಲೂ ಯಥಾರ್ಥತೆಯ ಅನಾವರಣ ಕಥೆಗಾರನ ಉದ್ದೇಶ. ಒಂದು ಇನ್ನೊಂದರಿಂದ ವಿಭಜಿಸಿ ನೋಡಲಾಗದ ಕರ್ಮ, ಆದರೆ ಇದು ಅಥವಾ ಇಂಥಹ ಬಾಂಧವ್ಯ ಎರಕ ಹೊಯ್ದು ಕೊಂಡವರು ತೀರ ಅಪರೂಪ. ಕೆಲವರಿಗೆ ಸಾಹಿತ್ಯ ಬೇರೆ, ಬದುಕೇ ಬೇರೆ, ಕಲ್ಪನೆಯಲ್ಲಿ ಹುಟ್ಟಿ ಪುಟಗಳಲ್ಲಿ ಅನಾವರಣಗೊಂಡು ರಂಜಿಸುವ ಬರೆಹ ಬಾಳುವುದಿಲ್ಲ. ಚಲಂ ಕತೆಗಾರಿಕೆ ಅಂತಹ ರೀತಿಯವು.
ಚಲಂ ಹಾಡ್ಲಹಳ್ಳಿ ಅವರ ಮೂಲ ಹೆಸರು ಪ್ರಸನ್ನ ಕುಮಾರ್ ಹೆಚ್.ಎನ್. ತಂದೆ- ಹಾಡ್ಲಹಳ್ಳಿ ನಾಗರಾಜ್, ತಾಯಿ- ಭವಾನಿ. ಹಾಡ್ಲಹಳ್ಳಿ ಅವರ ಊರು. ಕವಿಯಾಗಿ, ಕತೆಗಾರರಾಗಿ, ಜೊತೆಗೆ ರಂಗಭೂಮಿಯಲ್ಲಿಯೂ ತೊಡಗಿಕೊಂಡಿರುವ ಚಲಂ ಅವರ ಮೊದಲ ಕತಾಸಂಕಲನ ‘ಪುನರಪಿ’. ಅದಕ್ಕೂ ಮೊದಲು ’ಅವಳ ಪಾದಗಳು’ ಎಂಬ ಕವನ ಸಂಕಲನ ಪ್ರಕಟಗೊಂಡಿತ್ತು. ನಾನಾ ಪತ್ರಿಕೆಗಳಿಗೆ ಕತೆ, ಕವನ, ಲೇಖನಗಳನ್ನು ಬರೆದಿರುವ ಅವರ ಹಲವಾರು ನಾಟಕ ಪ್ರದರ್ಶನಗಳಿಗೆ ದುಡಿದಿದ್ದಾರೆ. ಹಾಸನದ ಜೇನುಗಿರಿ ಎಂಬ ದಿನಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದಕ್ಕೂ ಮುನ್ನ ಜಾಣಗೆರೆ ಪತ್ರಿಕೆ, ಅಗ್ನಿ, ಗೌರಿಲಂಕೇಶ್, ಜನತಾಮಾದ್ಯಮ, ಜನಮಿತ್ರ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ...
READ MORE