‘ತಿಮ್ಮು’ ಕೃತಿಯು ಪಿ. ಆರ್. ನಾಯ್ಕ್ ಅವರ ಸಣ್ಣಕತೆಯಾಗಿದೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ; ಪಿ.ಆರ್. ನಾಯ್ಕ್ ಅವರ ಈ ಕತೆಗಳನ್ನು ಓದುತ್ತ ನಾನು ಮತ್ತೆ ಮತ್ತೆ ಉತ್ತರಕನ್ನಡ ಜಿಲ್ಲೆಯಲ್ಲಿ ಸುತ್ತಾಡಿ ಬಂದಿದ್ದೇನೆ. ಅಲ್ಲಿಯ ಜನ ಜೀವನ, ಆಚಾರ ವಿಚಾರಗಳು, ಜೀವನಪದ್ಧತಿ, ಬಂಡಿಹಬ್ಬ, ಗೊಂಡರ ಆಚರಣೆಗಳು ಹೀಗೆ ಬಹಳಷ್ಟು ವಿಷಯಗಳನ್ನು ಈ ಕತೆಗಳು ನನಗೆ ನೆನಪು ಮಾಡಿಕೊಟ್ಟಿವೆ. ಉತ್ತರ ಕನ್ನಡದ ಸಮಗ್ರ ಬದುಕನ್ನು ಹಿನ್ನೆಲೆಯಾಗಿ ಇರಿಸಿಕೊಂಡು ನಾಯ್ಕರು ಕೆಲ ಉತ್ತಮ ಕತೆಗಳನ್ನು ಹೆಣೆದಿದ್ದಾರೆ. ಈ ಕತೆಗಳು ಎಲ್ಲಿಯೂ ನಡೆಯಬಹುದು. ಮೈಸೂರು, ಬೆಂಗಳೂರು, ಮಂಗಳೂರು, ಧಾರವಾಡದ ಹಿನ್ನೆಲೆಯಲ್ಲಿ ಈ ಕತೆಗಳನ್ನು ಹೇಳಿದರೂ ಇವು ಓದುಗರಿಗೆ ಹಿಡಿಸುತ್ತವೆ. ಆದರೆ ಒಂದು ಹಿನ್ನೆಲೆಯಿಂದ ಬಂದ ಲೇಖಕ ತನಗೆ ಗೊತ್ತಿರುವ ಹಿನ್ನೆಲೆಯನ್ನು, ಜನ ಜೀವನವನ್ನು ಕತೆ ಹೇಳಲು ಹೇಗೆ ರೂಢಿಸಿಕೊಳ್ಳುತ್ತಾನೆ ಅನ್ನುವುದಕ್ಕೆ ಈ ಕತೆಗಳು ಉತ್ತಮ ನಿದರ್ಶನವಾಗಿವೆ ಎಂಬುವುದನ್ನು ಪುಸ್ತಕದಲ್ಲಿ ನೋಡಬಹುದು.