ಲೇಖಕಿ ಅನುಪಮಾ ರಾಘವೇಂದ್ರ ಅವರ ಕಥಾ ಸಂಕಲನ ತಲ್ಲಣಗಳ ಪಲ್ಲವಿ. ಕಥೆಕಾರ್ತಿ, ಕಾದಂಬರಿಕಾರ್ತಿ ಪ್ರಸನ್ನಾ ವಿ ಚೆಕ್ಕೆಮನೆ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.
ದಕ್ಷಿಣ ಕನ್ನಡದ ಉಡುಪುಮೂಲೆಯವರಾದ ವಿದುಷಿ ಅನುಪಮಾ ರಾಘವೇಂದ್ರ ಭರತನಾಟ್ಯ ಕಲಾವಿದೆ, ನೃತ್ಯ ಶಿಕ್ಷಕಿ, ನೃತ್ಯ ಸಂಯೋಜಕಿ, ಬರಹಗಾರ್ತಿ, ಅಂಕಣಗಾರ್ತಿ, ಕಥಾಗಾರ್ತಿ, ಯಕ್ಷಗಾನ ಕಲಾವಿದೆ, ಅರ್ಥಧಾರಿ ಹಾಗೂ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.) ಸಂಸ್ಥೆಯ ಸ್ಥಾಪಕಾಧ್ಯಕ್ಷೆ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಇವರ ಹಲವಾರು ಕಥೆ , ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅನುಪಮಾ ಅವರ ಕಥೆಗಳಿಗೆ 2016 ರ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ , 2017 ರಲ್ಲಿ ಒಪ್ಪಣ್ಣ ಪ್ರತಿಷ್ಠಾನ ಏರ್ಪಡಿಸಿರುವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ. ಕೃತಿಗಳು: ನೃತ್ಯ, ಸಂಗೀತ , ಯಕ್ಷಗಾನ ...
READ MORE