ಕಣಾದ ರಾಘವ ಅವರ ಮೊದಲ ಕಥಾ ಸಂಕಲನ. ಇದು ಛಂದ ಪುಸ್ತಕ ಬಹುಮಾನ ಪಡೆದ ಕೃತಿ. ಸಂಕಲನದಲ್ಲಿ ಒಟ್ಟು 12 ಕಥೆಗಳಿವೆ. ಅಕ್ಬಚ್ಚಿ, ಕ್ಯಾನ್ ವಾಸ್ ಹೆಜ್ಜೆಗಳು, ಚೇತನಗಂಧ, ದೇಶಾಂತರ, ದಿವಾಸ್ವಾಪ, ಗಜಲುಗಳು, ಇಳಿಹಗಲ ಮಂಜೂಷೆ, ಕುರೀಮಂದೀ ರೀ, ನನ್ನ ಬೆಳಗು ನನ್ನದು, ನಟ್ಟಿರುಳ ಬೆಳಗು, ನೇಣಿಗೊಂದು ಸ್ವಗತ, ಶಲ್ಯ. ಮುಖಪುಟ ಮಾತ್ರವಲ್ಲದೆ ಒಳಪುಟಗಳಲ್ಲಿಯೂ ವಿ.ಎಂ. ಮಂಜುನಾಥ ಅವರ ಕಲಾಕೃತಿಗಳನ್ನು ಬಳಸಿಕೊಳ್ಳಲಾಗಿದೆ.
ಮುನ್ನುಡಿಯಲ್ಲಿ ಕೆ. ಸತ್ಯನಾರಾಯಣ ಅವರು ಕತೆಗಳ ಕುರಿತು ಹೀಗೆ ಬರೆದಿದ್ದಾರೆ; ‘ಮೆಚ್ಚಲು ಕಾರಣ ಬರಹದ ವಸ್ತು ಮತ್ತು ಅನುಭವ ವೈವಿಧ್ಯ. ಈ ವೈವಿಧ್ಯವನ್ನು ಕತೆಗಾರಿಕೆಯಲ್ಲಿ ಮೀಯಿಸಿ, ಹೊಸತೇನನ್ನೋ ಹೊಳೆಯಿಸಬಹುದೆ ಎಂಬುದರ ಬಗ್ಗೆ ಇರುವ ಪ್ರಯತ್ನಶೀಲತೆ. ಸಾಮಾನ್ಯವಾಗಿ ಕತೆಗಾರರ ಬರವಣಿಗೆ-ಇಲ್ಲಾ ಅವರ ಸಾಮಾಜಿಕ ಹಿನ್ನೆಲೆಗೆ, ಇಲ್ಲಾ ಸೀಮಿತ ಪ್ರತ್ಯಕ್ಷ ಘಟನಾವಳಿಗೆಗಳಿಗೆ ಸೀಮಿತವಾಗಿರುತ್ತದೆ. ಇಲ್ಲಾ ಈ ನೆಲೆಗಳಿಂದಲೇ ಸ್ಪೂರ್ತಿ ಪಡೆದಿರುತ್ತದೆ. ತನ್ನ ಹಿನ್ನೆಲೆ, ವಯಸ್ಸು, ತನ್ನ ಮನೋಧರ್ಮಕ್ಕೆ ಭಿನ್ನವಾದ, ಹೊರತಾದ ಪದಾರ್ಥಗಳಿಗೆ ಕತೆಗಾರರು ಲಗ್ಗೆ ಹಾಕುವುದು ನಮ್ಮಲ್ಲಿ ಕಡಿಮೆ. ಮಾಸ್ತಿಯವರನ್ನು ಬಿಟ್ಟರೆ. ರಾಘವರು ವೃತ್ತಿಯಲ್ಲಿ ವೈದ್ಯರಾಗಿರುವುದು ಕೂಡ ಸ್ಪಂದನಶೀಲತೆಯ ವೈಶಾಲ್ಯಕ್ಕೆ ಕಾರಣವಾಗಿರಬಹುದು.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಚಿಪಗೇರಿಯವರಾದ ರಾಘವ ಅವರು ಬಾಲ್ಯ ಕಳೆದದ್ದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ. ತಂದೆ ವಿದ್ವಾನ್ ನರಹರಿ ಕೇಶವಭಟ್ ಅವರು ನಿವೃತ್ತ ತರ್ಕಶಾಸ್ತ್ರ ಸಹಪ್ರಾಧ್ಯಾಪಕರು ಮತ್ತು ಸಂಸ್ಕೃತ ಸಾಹಿತಿ. ತಾಯಿ ಸುಮಂಗಲಾ ಭಟ್. ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಆಯುರ್ವೇದ ವೈದ್ಯ ಪದವಿ ಪಡೆದ ರಾಘವ ಅವರು ಬೆಂಗಳೂರಿನ ಶ್ರೀನಗರದಲ್ಲಿ ‘ನಮನ ಆಯುರ್ವೇದ ಚಿಕಿತ್ಸಾ ಕೇಂದ್ರ ನಡೆಸುತ್ತಿದ್ದಾರೆ. ಸಂಗೀತ- ಚಾರಣದಲ್ಲಿ ಆಸಕ್ತಿ ಹೊಂದಿರುವ ರಾಘವ ಅವರು ಮೊದಲ ಮಳೆಯ ಮಣ್ಣು ಕಥಾ ಸಂಕಲನ ಪ್ರಕಟಿಸಿದ್ದಾರೆ. ...
READ MOREಕಣಾದ ರಾಘವ ಅವರ ಮೊದಲ ಮಳೆಯ ಮಣ್ಣು ಪುಸ್ತಕ ಪರಿಚಯ.